ಬೆಂಗಳೂರು: ಎಚ್ ಎಎಮ್ ನಿಲ್ದಾಣದಲ್ಲಿ ಮಿರಾಜ್ 2000 ಯುದ್ಧ ವಿಮಾನ ಪತನದೊಂಡ ಹುತಾತ್ಮರಾದ ಫೈಲಟ್ ಸ್ವಾಡ್ರನ್ ಲೀಡರ್ ಸಿದ್ದಾರ್ಥ್ ನೇಗಿ ಅವರ ಅಂತ್ಯಕ್ರಿಯೆ ಇಂದಿರಾನಗರದಲ್ಲಿ ಕಲ್ಪಳ್ಳಿ ಸ್ಮಶಾನದಲ್ಲಿ ಶನಿವಾರ ನಡೆಯಿತು.
ಶುಕ್ರವಾರ ಬೆಳಿಗ್ಗೆ ಮಿರಾಜ್ 2000 ಯುದ್ಧ ವಿಮಾನ ಪತನಗೊಂಡು ಡೆಹ್ರಾಡೂನ್ ನ ನೇಗಿ ಹಾಗೂ ಗಾಜಿಯಾಬಾದ್ ನ ಸಮೀರ್ ಅಬ್ರಾಲ್ ಅವರು ಮೃತಪಟ್ಟಿದ್ದರು.
ನೇಗಿ ಅವರು ಕುಟುಂಬ ನಗರಕ್ಕೆ ಬಂದಿದ್ದರಿಂದ ಶುಕ್ರವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶನಿವಾಋ ಬೆಳಿಗ್ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.