ಬೆಂಗಳೂರು:ಹೆಡ್ಫೋನ್ ಅಥವಾ ಇಯರ್ಫೋನ್ ಧರಿಸಿ ವಾಹನ ಚಾಲನೆ ಮಾಡಿದರೆ ಅಂತಹವರನ್ನು ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಚಾಲನೆ ಮಾಡುವ ವೇಳೆ ಫೋನ್ ಬಳಕೆ ಅಥವಾ ಬ್ಲೂಟೂತ್, ಹೆಡ್ಫೋನ್ ಬಳಸುವುದು ಕಾನೂನುಬಾಹಿರವಾಗಿದ್ದು, ಸಿಕ್ಕಿಬಿದ್ದರೆ ಅಂತಹವರಿಗೆ ಸಂಚಾರ ಪೊಲೀಸರು 1000 ರೂ. ದಂಡ ವಿಧಿಸಲಿದ್ದಾರೆ.
ವಾಹನಗಳಲ್ಲಿ ಚಲಿಸುವಾಗ ಟ್ರಾಫಿಕ್ನಲ್ಲಿ ರೆಡ್ ಸಿಗ್ನಲ್ ಬಿದ್ದಾಗ ಕೂಡ ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ಬಳಕೆಯಿಂದ ಅಕ್ಕಪಕ್ಕದ ವಾಹನ ಸವಾರರಿಗೆ ತೊಂದರೆಯಾಗಲಿದೆ. ಅದೇ ರೀತಿ ಕಾರು ಚಾಲಕರು ಆಧುನಿಕ ಸಾಧನಗಳನ್ನು ಬಳಸಿ ಸಿಗ್ನಲ್ನಲ್ಲಿ ಲೌಡ್ ಸ್ಪೀಕರ್ ಹಾಕಿ ಮಾತನಾಡುವುದು ಕೂಡ ಕಾನೂನು ಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲನೆ ವೇಳೆ ಹೆಡ್ಫೋನ್ ಅಥವಾ ಬ್ಲೂಟೂತ್ ಡಿವೈಸ್ ಮೂಲಕ ಮ್ಯೂಸಿಕ್ ಕೇಳುವುದು, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಗೂಗಲ್ ಮ್ಯಾಪ್ ನೋಡುವುದು ಕೂಡ ಸಂಚಾರ ನಿಯಮ ಉಲ್ಲಂಘನೆಯಾಗಲಿದೆ. ಹಾಗಾಗಿ, ಬೈಕ್ ಅಥವಾ ಕಾರುಗಳಲ್ಲಿ ಫೋನ್ ಹೋಲ್ಡರ್ ಅಳವಡಿಸಿ ಅದರಲ್ಲಿ ಫೋನ್ಗಳನ್ನಿಟ್ಟು ಮ್ಯಾಪ್ ವೀಕ್ಷಿಸಲು ಅವಕಾಶವಿದೆ ಎಂದು ಪೊಲೀಸರು ಹೇಳಿದ್ದಾರೆ.