News Karnataka Kannada
Monday, April 29 2024
ವಿದೇಶ

ಹೊಸ ಐಟಿ ನಿಯಮಗಳು 2021 ರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳ ನಿಷೇದ

Whatsapp
Photo Credit :

ನವದೆಹಲಿ: ಹೊಸ ಐಟಿ ನಿಯಮಗಳು 2021 ರ ಪ್ರಕಾರ ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಶುಕ್ರವಾರ ಹೇಳಿದೆ.

ಆಗಸ್ಟ್ 1-ಆಗಸ್ಟ್ 31 ರ 30 ದಿನಗಳ ಅವಧಿಯ ಎರಡನೇ ಮಾಸಿಕ ವರದಿಯಲ್ಲಿ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021ರ ಪ್ರಕಾರ ವಾಟ್ಸಾಪ್ ಭಾರತದ ಬಳಕೆದಾರರಿಂದ 420 ದೂರು-ಕುಂದುಕೊರತೆಗಳನ್ನು ಇ-ಮೇಲ್, ಅಂಚೆ ಮೂಲಕ ಸ್ವೀಕರಿಸಿದ 420 ಕುಂದುಕೊರತೆಗಳನ್ನು ವಾಟ್ಸಾಪ್ ಸ್ವೀಕರಿಸಿದೆ.

ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್​ಆಪ್​ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 31 ರ 30 ದಿನಗಳ ಅವಧಿಯಲ್ಲಿ 20.7 ಲಕ್ಷ ಖಾತೆಗಳು ಬ್ಯಾನ್‌ ಆಗಿವೆ.

ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸಾಪ್ ತೆಗೆದುಕೊಂಡ ಅನುಗುಣವಾದ ಕ್ರಮವನ್ನು ಒಳಗೊಂಡಿದೆ, ಜೊತೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ದುರುಪಯೋಗವನ್ನು ಎದುರಿಸಲು ವಾಟ್ಸಾಪ್ ತನ್ನದೇ ಆದ ತಡೆಗಟ್ಟುವ ಕ್ರಮಗಳನ್ನು ಹೊಂದಿದೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು