News Karnataka Kannada
Saturday, May 11 2024
ಕರ್ನಾಟಕ

ರಾಯಚೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ: ೧೯ ಕ್ವಾರಂಟೈನ್ ಜೋನ್‌ಗಳ ಸ್ಥಾಪನೆ

Photo Credit :

ರಾಯಚೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ: ೧೯ ಕ್ವಾರಂಟೈನ್ ಜೋನ್‌ಗಳ ಸ್ಥಾಪನೆ

ರಾಯಚೂರು- ಜಿಲ್ಲೆಯ ದೇವದುರ್ಗ ತಾಲೂಕಿನಿಂದ ೭೫, ರಾಯಚೂರಿನಿಂದ ೯, ಮಾನವಿ ಮತ್ತು ಸಿರವಾರದ ತಲಾ ಒಂದು ಹಾಗೂ ಲಿಂಗಸೂಗೂರು ತಾಲೂಕಿನ ೨ ಪ್ರಕರಣಗಳು ಸೇರಿ ೮೮ ಪ್ರಕರಣಗಳು ಜೂ.೪ರ ಗುರುವಾರ ದೃಢಪಟ್ಟಿದ್ದು, ಹೊಸದಾಗಿ ಐದು ಕಟ್ಮೋನೆಂಟ್ ವಲಯಗಳು ಸೇರಿದಂತೆ ಒಟ್ಟು ೧೯ ಕಂಟೋನ್ಮೆAಟ್ ವಲಯಗಳನ್ನು ರಚಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ತಿಳಿಸಿದರು.

       ಅವರು ಜೂ.೫ರ ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ರಾಯಚೂರಿನ ಪಶ್ಚಿಮ ಠಾಣೆಯ ಮೂರು ಜನ ಪೊಲೀಸರಲ್ಲಿ ಕೋರೋನಾ ಸೋಂಕು ಪತ್ತೆಯಾಗಿರುವದರಿಂದ ಗೋಲ್ ಮಾರ್ಕೆಟ್, ರಾಂಪೂರಿನ ಪೋಸ್ಟ್ ಮ್ಯಾನ್‌ನಲ್ಲಿ ಸೋಂಕು ಕಂಡಿದ್ದರಿAದ ರಾಂಪೂರು ಮತ್ತು ಅಸ್ಕಿಹಾಳ ಅಶಾಕಾರ್ಯಕತೆಯಲ್ಲಿ ಸೊಂಕು ಕಂಡಿದ್ದರಿAದ ಅಸ್ಕಿಹಾಳ ಗ್ರಾಮಗಳಲ್ಲಿ ಕಟ್ಮೊಂನೇಟ್ ಪ್ರದೇಶಗಳನ್ನು ರಚಿಸಲಾಗಿದೆ. 

ಕೃಷಿ ವಿಶ್ವವಿದ್ಯಾಲಯ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶ್ಚಿಮ ಠಾಣೆಯ ಮೂರು ಜನ ಪೊಲೀಸರಲ್ಲಿ ಸೋಂಕು ಪತ್ತೆಯಾಗಿದೆ. ಅದೇ ರೀತಿ ರಾಂಪೂರು ಪೋಸ್ಟ್ ಮ್ಯಾನ್ ಸಹ ಅದೇ ವ್ಯಾಪ್ತಿಯಲ್ಲಿರುವದರಿಂದ ಸೋಂಕು ಬಂದಿದೆ. ಅಸ್ಕಿಹಾಳ ಅಶಾ ಕಾರ್ಯಕರ್ತೆಯ ಸಹೋದರ ಬೆಂಗಳೂರಿನಿAದ ಬಂದಿದ್ದು ಪ್ರಥಮ ಸಂಪರ್ಕ ಹೊಂದಿದ್ದರಿAದ ಸೋಂಕು ಪತ್ತೆಯಾಗಿದೆ. ಇನ್ನುಳಿದ ನಾಲ್ಕು ಪ್ರಕರಣಗಳು ಕ್ವಾರಂಟೈನ್ ಕೇಂದ್ರದಲ್ಲಿರಲ್ಲಿ ಪತ್ತೆಯಾಗಿದೆ ಎಂದರು. 

ಸಿರವಾರದ ಗುಡಿದಿನ್ನಿ ವ್ಯಕ್ತಿಯಲ್ಲಿ ಎಸ್‌ಎಆರ್‌ಐ, ಅಸ್ತಮ ಇರುವದರಿಂದ ಸೋಂಕು ಪತ್ತೆಯಾಗಿದೆ. ಮಾನವಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಹೈದ್ರಾಬಾದನಿಂದ ಬಂದಿದ್ದು ಸೋಂಕು ಕಂಡಿದೆ. ಗುಡಿದಿನ್ನಿ, ಲಿಂಗಸೂಗೂರು ತಾಲೂಕಿನ ಕರಡಕಲ್, ಹಟ್ಟಿ ಕಂಟ್ನೋನೆAಟ್ ಕೇಂದ್ರಗಳೆAದು ಗುರುತಿಸಲಾಗಿದೆ ಎಂದರು.

ದೇವದುರ್ಗ ತಾಲೂಕಿನಲ್ಲಿ ೭೫ ಪ್ರಕರಣಗಳು ಪತ್ತೆಯಾಗಿದ್ದು ಕೊತ್ತದೊಡ್ಡಿಯಲ್ಲಿ ೪೬ ಮತ್ತು ನಗರಗುಂಡ ರಸ್ತೆ ಪದವಿ ಕಾಲೇಜಿನ ಕ್ವಾರಂಟೈನ್ ಕೇಂದ್ರದಲ್ಲಿ ೨೯ ಸೋಂಕು ಪ್ರಕರಣಗಳು ಪತ್ತೆಯಾಗಿವೆ.  ಮಹಾರಾಷ್ಟçದಿಂದ ಮರಳಿದ ಕುಟುಂಬದಸ್ಥರ ಸಂಪರ್ಕದಿAದ ವೈರಸ್ ಹರಡಿದೆ. ದೇವದುರ್ಗ ತಾಲೂಕಿನ ಮ್ಯಾಕಲದೊಡ್ಡಿ, ಕಕ್ಕಲದೊಡ್ಡಿ, ಪರಾಪುರು, ಜಾಲಹಳ್ಳಿ ಮತ್ತು ದೇವದುರ್ಗ ಪಟ್ಟಣಗಳಲ್ಲಿ ಕಂಟೋನ್ಮೇಟ್ ಕೇಂದ್ರಗಳಾಗಿಸಲಾಗಿದೆ. ಮಸ್ಕಿಯಲ್ಲಿ ನಾಲ್ಕು ಕಂಟ್ನೋನ್ಮೇಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮಸ್ಕಿ ಪಟ್ಟಣದಲ್ಲಿ ಮೂರು ಮತ್ತು ಜೋಳದರಾಶಿ ಗ್ರಾಮಗಳನ್ನು ಎಚ್ಚರವಹಿಸಲಾಗಿದೆ. ಲಿಂಗಸೂಗೂರು ತಾಲೂಕಿನ ಸರ್ಜಾಪುರ, ಹಟ್ಟಿ  ಮತ್ತು ಲಿಂಗಸಗೂರುಗಳಲ್ಲಿ ಕಂಟೋನ್ಮೇಟ್ ಕೇಂದ್ರಗಳನ್ನಾಗಿ ಎಚ್ಚರಿಕೆವಹಿಸಲಾಗುತ್ತಿದೆ ಎಂದರು. 

ಜೂ.೪ರ ವರೆಗೆ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿದ್ದ ೧೧,೦೬೬ ಜನರಲ್ಲಿ ೯,೮೮೫ ಜನರನ್ನು ಬಿಡುಗಡೆಗೊಳಿಸಲಾಗಿದೆ. ೧,೨೩೮ ಜನರು ಇನ್ನೂ ಕೇಂದ್ರಗಳಿದ್ದು ಪರೀಕ್ಷೆ ನಡೆಸಿ ಬಿಡುಗಡೆಗೊಳಿಸಲಾಗುತ್ತದೆ.

ಪಿ-೨೬೧೨  ಸೋಂಕಿತನಿAದ ೩೮ ಜನರಿಗೆ ಸೋಂಕು ಹರಡಿಲ್ಲ, ಈ ಬಗ್ಗೆ ರಾಜ್ಯ ಬುಲಿಟಿನ್‌ನಲ್ಲಿ ತಪ್ಪಾಗಿ ವರದಿಯಾಗಿದ್ದು, ಈ ಬಗ್ಗೆ ತಿಳಿಸಲಾಗಿದೆ. ಅದೇ ರೀತಿ ಪಿ ೨೬೦೮ ನಿಂದ ೧೭ ಜನರಿಗೆ, ಪಿ-೨೯೩೬ ನಿಂದ ಆರು ಜನರಿಗೆ  ೨೯೩೯ ರಿಂದ ೧೪ ಜನರಿಗೆ ಸೋಂಕು ಹರಡಿರುವುದಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಹತ್ತಿರ ಕುಟುಂಬಸ್ಥರಿAದ ವಿಸ್ತರಿಸಿಕೊಂಡಿದೆ ಎಂದರು.

ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ಬಾಲಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೃದಯ ಸಂಬAಧಿಸಿ ಸಮಸ್ಯೆ ಸೇರಿದಂತೆ ಇತರೆ ಕಾಯಿಲೆಗಳಿದ್ದವು. ಆತನಲ್ಲಿಯೂ ಕೋರೋನಾ ಸೋಂಕು ಪತ್ತೆಯಾಗಿದೆ. ತಜ್ಞರ ತಂಡದಿAದ ಪರಿಶೀಲನೆ ನಡೆಸಿ ಆರೋಗ್ಯದದಾಖಲೆ ಸಂಗ್ರಹಿಸಲಾಗುತ್ತಿದೆ. ಎರಡನೇ ಬಾರಿ ಪರೀಕ್ಷೆ ನಡೆಸಿದಾದ ಪಾಸಿಟಿವ್ ಇರುವದು ಪತ್ತೆಯಾಗಿದೆ ಎಂದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಬಿಡುಗಡೆಗೊಳಿಸಲಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿರುವ ಆರ್‌ಟಿ-ಪಿಸಿಎರ್ ಪರೀಕಾ ಕೇಂದ್ರದಲ್ಲಿ  ೯೩೨ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ೧೧೯ ಪ್ರಕರಣಗಳ ಫಲಿತಾಂಶ ಲಭಿಸಿದೆ ಎಂದವರು ತಿಳಿಸಿದರು.

ಶಾಲೆಗಳು ಪ್ರಾರಂಭವಾಗಿದ್ದು ಎಲ್ಲಾ ಕ್ವಾರಂಟೈನ್ ಶಾಲೆಗಳಿಗೆ ರಾಸಾಯನಿಕ ಸಿಂಪಡಿಸಲಾಗಿದೆ. ಶಿಕ್ಷಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಮಾತನಾಡಿ, ಕ್ವಾರಂಟೈನ್ ಕೇಂದ್ರದಲ್ಲಿ ತಪ್ಪು ಮಾಹಿತಿ, ಬೇರೆ ಮೊಬೈಲ್ ಸಂಖ್ಯೆ ನೀಡಿದ್ದರಿಂದ ೨೦೬ ಜನ ತಪ್ಪಿಸಿಕೊಂಡಿದ್ದ ಮಾಹಿತಿ ನೀಡಲು ಕಾರಣವಾಯಿತು, ಆದರೆ ಪರೀಶೀಲನೆ ನಡೆಸಿದಾಗ ಎಲ್ಲರೂ ಕೇಂದ್ರದಲ್ಲಿರುವುದು ಪತ್ತೆಯಾಗಿದೆ. ಪಶ್ಚಿಮ ಠಾಣೆಯಲ್ಲಿ ಮೂರು ಜನ ಪೇದೆಗಳಲ್ಲಿ ಸೋಂಕು ಕಂಡು ಬಂದಿದ್ದು ಅವರು ಕೋವಿಡ್-೧೯ ಐಸೋಲೇಷನ್ ವಾರ್ಡಿಗೆ ದಾಖಲಿಸಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ದುರುಗೇಶ್, ಸಹಾಯಕ ಆಯುಕ್ತ ಸಂತೋಷ ಕಾಮನಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ, ಡಾ.ನಾಗರಾಜ ಗೋಷ್ಠಿಯಲ್ಲಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು