News Karnataka Kannada
Sunday, April 28 2024
ಕರ್ನಾಟಕ

ನಾಳೆ ಹಂಪಿ ವೀಕ್ಷಣೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Venkaiah Naidu
Photo Credit :

ಬೆಂಗಳೂರು, ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬ ಸಮೇತವಾಗಿ ನಾಳೆಯಿಂದ ವಿಶ್ವವಿಖ್ಯಾತ ಹಂಪಿ ವೀಕ್ಷಣೆ ಮಾಡಲಿದ್ದಾರೆ. ನಾಳೆ ಮತ್ತು ಆ.21ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತಿರುವ ವೆಂಕಯ್ಯ ನಾಯ್ಡು ಅವರ ಜೊತೆಯಲ್ಲಿ ಅವರ ಧರ್ಮ ಪತ್ನಿ ಎಂ ಉಷಾ ಸಹ ಆಗಮಿಸುತ್ತಿದ್ದಾರೆ.
ಸುಗಮ ಪ್ರವಾಸಕ್ಕಾಗಿ ಹಂಪಿಯಲ್ಲಿ ಹಲವು ರೀತಿಯ ಸಿದ್ಧತೆ ನಡೆಯುತ್ತಿದ್ದು, ನಾಳೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಯ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5.20ಕ್ಕೆ ಉಪರಾಷ್ಟ್ರಪತಿಗಳು ಆಗಮಿಸುವರು. ನಂತರ ತುಂಗಭದ್ರಾ ಡ್ಯಾಂ ವೀಕ್ಷಣೆ ಮಾಡಲಿದ್ದಾರೆ.ಬಳಿಕ ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್‍ನಲ್ಲಿ ತಂಗಲಿದ್ದಾರೆ. ಆ.21ರಂದು ಬೆಳಿಗ್ಗೆಯಿಂದ ಸಂಜೆವರಗೆ ಹಂಪಿಯ ಶ್ರೀವಿರೂಪಾಕ್ಷ ದೇವಸ್ಥಾನ, ಸಾಸುವೆಕಾಳು, ಕಡಲೇಕಾಳು ಗಣೇಶ, ಕೃಷ್ಣ ದೇವಸ್ಥಾನ, ಕಮಲಮಹಲ್, ಗಜಶಾಲೆ, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇವಸ್ಥಾನ ಮೊದಲಾದ ಸ್ಮಾರಕಗಳನ್ನು ಉಪರಾಷ್ಟ್ರಪತಿಗಳು ವೀಕ್ಷಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು