ಕೊರೋನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ನಾಳೆಯಿಂದ ಎಲ್ಕೆಜಿ, ಯುಕೆಜಿ ಹಾಗೂ ಅಂಗನವಾಡಿ ಆರಂಭವಾಗಲಿದೆ.
ನಾಳೆ ತರಗತಿ ಆರಂಭವಾಗುತ್ತಿರುವ ಹಿನ್ನೆಲೆ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಎಲ್ಕೆಜಿ, ಯುಕೆಜಿ ಮತ್ತು ಅಂಗನವಾಡಿ ಆರಂಭವಾಗಲಿದೆ.
ಇವುಗಳ ಆರಂಭಕ್ಕೆ ಗೈಡ್ಲೈನ್ಸ್
- ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ.
- ಅನುಮತಿ ಪತ್ರದಲ್ಲಿ ಮಗುವಿಗೆ ಕೋವಿಡ್ ಇಲ್ಲ ಎಂದು ದೃಢೀಕರಿಸಬೇಕು.
- ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಪಡೆದಿರಬೇಕು.
- ಅಂಗನವಾಡಿ ಆರಂಭದ ಬಗ್ಗೆ ಪಂಚಾಯಿತಿಗೆ ಮಾಹಿತಿ ಇರಬೇಕು.
- ಕೋವಿಡ್ ಲಕ್ಷಣ ಇರುವ ಮಕ್ಕಳು ಶಾಲೆಗೆ ಬರುವಂತಿಲ್ಲ.
- ಮಕ್ಕಳಿಗೆ ಒಂದು ದಿನ ರಜೆ ಕಡ್ಡಾಯ.
- ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿನೀರು ನೀಡಬೇಕು.
- ಬೆಳಗ್ಗೆ 9:30ರಿಂದ 3:30ರವರೆಗೆ ಶಾಲೆ ಓಪನ್.