Bengaluru 23°C
Ad

ದೆಹಲಿಯಲ್ಲಿ ಬಿಸಿಲ ಝಳಕ್ಕೆ ಐವರು ಬಲಿ : 12 ಮಂದಿ ಅಸ್ವಸ್ಥ

ಈ ಬಾರಿಯ ಬಿಸಿಲು ದೇಶದಾದ್ಯಂತ ಜನರನ್ನು ಕಂಗಾಲಾಗಿಸಿಬಿಟ್ಟಿದೆ. ಕೆಲವೆಡೆ ವರುಣ ಆಗಮನದಿಂದ ಧರೆಗೆ ತಂಪೆರೆದಿದ್ದಾನೆ ಆದರೆ ಇನ್ನೂ ಕೆಲವೆಡೆ ಮಳೆ ಸುಳಿವು ಕಂಡಿಲ್ಲ.

ನವದೆಹಲಿ: ಈ ಬಾರಿಯ ಬಿಸಿಲು ದೇಶದಾದ್ಯಂತ ಜನರನ್ನು ಕಂಗಾಲಾಗಿಸಿಬಿಟ್ಟಿದೆ. ಕೆಲವೆಡೆ ವರುಣ ಆಗಮನದಿಂದ ಧರೆಗೆ ತಂಪೆರೆದಿದ್ದಾನೆ ಆದರೆ ಇನ್ನೂ ಕೆಲವೆಡೆ ಮಳೆ ಸುಳಿವು ಕಂಡಿಲ್ಲ. ಆದರೆ ಈ ಸುಡುತ್ತಿರುವ ಬಿಸಿಲು ಹೆಚ್ಚಿನ ಮಳೆಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.  ಇದೀಗ ದೆಹಲಿಯಲ್ಲಿನ ಬಿಸಿಲಿನ ಝಳಕ್ಕೆ ಜನ ತತ್ತರಿಸಿಹೋಗಿದ್ದಾರೆ.ಎರಡು ದಿನಗಳಲ್ಲಿ ಐವರು ಕೊನೆಯುಸಿರೆಳೆದಿದ್ದು, ಕನಿಷ್ಠ 12ಕ್ಕೂ ಅಧಿಕ ಜನರು ರಾಮ್‌ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.

Ad
300x250 2

ಅತೀ ಹೀಟ್‌ ಸ್ಟ್ರೋಕ್‌ನಿಂದಾಗಿ ಜನ ಅಸ್ವಸ್ಥಗೊಂಡಿದ್ದು, ಇತರ ಆಸ್ಪತ್ರೆಗಳಲ್ಲಿಯೂ ಹಲವು ಮಂದಿ ದಾಖಲಾಗಿರುವುದಾಗಿ ವರದಿ ತಿಳಿಸಿದೆ. ಒಟ್ಟು 22 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು ಅದರಲ್ಲಿ ಐವರು ಸಾವಪ್ಪಿದ್ದಾರೆ. ಹೀಟ್‌ ಸ್ಟ್ರೋಕ್‌ ಪ್ರಕರಣಗಳಲ್ಲಿ ಮರಣದ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಹಿರಿಯ ವೈದ್ಯರು ಎಚ್ಚರಿಸಿದ್ದಾರೆ.

Ad
Ad
Nk Channel Final 21 09 2023
Ad