Ad

ಒಡಿಶಾದ ವಿರೋಧ ಪಕ್ಷದ ನಾಯಕರಾಗಿ ನವೀನ್ ಪಟ್ನಾಯಕ್ ಆಯ್ಕೆ

ಒಡಿಶಾದಲ್ಲಿ ಐದು ಅವಧಿಯ ಮುಖ್ಯಮಂತ್ರಿ ಆಗಿದ್ದ, ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರನ್ನು ಒಡಿಶಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಭುವನೇಶ್ವರ್ : ಒಡಿಶಾದಲ್ಲಿ ಐದು ಅವಧಿಯ ಮುಖ್ಯಮಂತ್ರಿ ಆಗಿದ್ದ, ಬಿಜೆಡಿ ಅಧ್ಯಕ್ಷ ನವೀನ್ ಪಟ್ನಾಯಕ್ ಅವರನ್ನು ಒಡಿಶಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

Ad
300x250 2

ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ನಾಯಕ್, ಬುಧವಾರ ನಡೆದ ಬಿಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಾವು ಬಿಜೆಡಿ ಶಾಸಕರ ಸಭೆ ನಡೆಸಿದ್ದೇವೆ. ನಾನು ಅವರನ್ನು ಅಭಿನಂದಿಸಿ ಧನ್ಯವಾದ ಸಲ್ಲಿಸಿದೆ. ಅವರು ನನ್ನನ್ನು ವಿರೋಧ ಪಕ್ಷದ ನಾಯಕ ಮತ್ತು ಬಿಜೆಡಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ” ಎಂದು ಅವರು ಹೇಳಿದರು.

Ad
Ad
Nk Channel Final 21 09 2023
Ad