Bengaluru 22°C
Ad

ಲೋಕಸಭಾ ಚುನಾವಣೆ ಬಳಿಕ ಮತ್ತೊಂದು ಯಾತ್ರೆಗೆ ಕಾಂಗ್ರೆಸ್‌ ಸಿದ್ಧತೆ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟದ ನಂತರ ಕಾಂಗ್ರೆಸ್‌ ಮತ್ತೊಂದು ಮಹಾ ಯಾತ್ರೆಗೆ ಸಿದ್ದತೆ ನಡೆಸಿದ್ದು ಈಗಾಗಲೇ ಈ ಬಗ್ಗೆ ಘೋಷಿಸಿದೆ. ಧನ್ಯವಾದ ಯಾತ್ರೆ ಹೆಸರಿನಲ್ಲಿ ಜೂನ್ 11 ರಿಂದ ಜೂನ್ 15ರವರೆಗೆ ಈ ಯಾತ್ರೆ ನಡೆಯಲಿದೆ. ಧನ್ಯವಾದ ಯಾತ್ರೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ರಾಜ್ಯದ 403 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ.

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟದ ನಂತರ ಕಾಂಗ್ರೆಸ್‌ ಮತ್ತೊಂದು ಮಹಾ ಯಾತ್ರೆಗೆ ಸಿದ್ದತೆ ನಡೆಸಿದ್ದು ಈಗಾಗಲೇ ಈ ಬಗ್ಗೆ ಘೋಷಿಸಿದೆ. ಧನ್ಯವಾದ ಯಾತ್ರೆ ಹೆಸರಿನಲ್ಲಿ ಜೂನ್ 11 ರಿಂದ ಜೂನ್ 15ರವರೆಗೆ ಈ ಯಾತ್ರೆ ನಡೆಯಲಿದೆ. ಧನ್ಯವಾದ ಯಾತ್ರೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ರಾಜ್ಯದ 403 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಗುರಿಯನ್ನು ಹೊಂದಲಾಗಿದೆ.

ಈ ಯಾತ್ರೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಯಾತ್ರೆ ವೇಳೆ ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯದ ಜನರಿಗೆ ಸಂವಿಧಾನದ ಪ್ರತಿಯನ್ನು ನೀಡಿ ಗೌರವಿಸಲಾಗುತ್ತದೆ.

ಈ ಬಾರಿ ಎದುರಾಳಿ ಬಿಜೆಪಿ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ತಮ್ಮ ಮೈತ್ರಿಕೂಟದ ಸದಸ್ಯರನ್ನು ಗೆಲ್ಲಿಸಿದ ಮತ್ತು ತಮಗೆ ಮತ ನೀಡಿದ ಜನತೆಗೆ ಧನ್ಯವಾದ ಸಲ್ಲಿಸಲು ಕಾಂಗ್ರೆಸ್ ಈ ಯಾತ್ರೆಯನ್ನು ಹಮ್ಮಿಕೊಂಡಿದೆ. ಧನ್ಯವಾದ ಯಾತ್ರೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Ad
Ad
Nk Channel Final 21 09 2023
Ad