ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಇಸ್ರೇಲ್‌ನ ‘ನಾಗರಿಕ ಸಾಹಸಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿ’ಯನ್ನು (Presidential Award for Civilian Heroism) ಪ್ರದಾನ ಮಾಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಘೋಷಿಸಿದ್ದಾರೆ.

2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ಪ್ರಧಾನಿ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್‌ ಅವರಿಗೆ ಆಹ್ವಾನ ನೀಡಲಾಗಿದೆ. ಸಾಂಪ್ರದಾಯಿಕವಾಗಿ ಇಸ್ರೇಲಿ ನಾಗರಿಕರಿಗೆ ಮಾತ್ರ ಈ ಆಚರಣೆ ಸೀಮಿತವಾಗಿತ್ತು. ಈ ಅಪರೂಪದ ಗೌರವ ಈಗ ಭಾರತೀಯರಿಗೆ ನೀಡಲಾಗುತ್ತಿರುವುದು ವಿಶೇಷವಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೈಲಟ್ ಸ್ಮಿತ್‌ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ ನೆತನ್ಯಾಹು, ಭಾರತ ಮತ್ತು ಇಸ್ರೇಲ್‌ನ ಧೈರ್ಯಶಾಲಿ ಜನರ ನಿಜವಾದ ಹೀರೋ ನೀವು. ಇಡೀ ಜಗತ್ತಿನ ಹೀರೋ ಕೂಡ ನೀವೇ ಎಂದು ಸ್ಮಿತ್‌ ಅವರ ಸಾಹಸವನ್ನು ಕೊಂಡಾಡಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಕಚೇರಿ ಬಿಡುಗಡೆ ಮಾಡಿದೆ.

View this post on Instagram

A post shared by News Karnataka (@newskarnataka)