Bengaluru 22°C
Ad

ಹಿಜಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್, ಟೀ ಶರ್ಟ್‌ ನಿಷೇಧಿಸಿದ ಕಾಲೇಜು

Jeans

ವದೆಹಲಿ: ಹಿಜಾಬ್‌ ನಿಷೇಧದ ಬೆನ್ನಲ್ಲೆ ಮುಂಬೈನ ಕಾಲೇಜೊಂದು ಹರಿದ ಜೀನ್ಸ್, ಟೀ ಶರ್ಟ್‌ ಮತ್ತು ರಿವಿಲಿಂಗ್‌ ಡ್ರೆಸ್‌‍ಗಳನ್ನು ಬ್ಯಾನ್‌ ಮಾಡಿದೆ. ಚೆಂಬೂರ್‌ ಟ್ರಾಂಬೆ ಎಜುಕೇಶನ್‌ ಸೊಸೈಟಿಯ ಎನ್‌ಜಿ ಆಚಾರ್ಯ ಮತ್ತು ಡಿಕೆ ಮರಾಠೆ ಕಾಲೇಜಿನ ಆಡಳಿತವು ಹೊರಡಿಸಿದ ನೋಟಿಸ್‌‍ನಲ್ಲಿ, ವಿದ್ಯಾರ್ಥಿಗಳು ಕ್ಯಾಂಪಸ್‌‍ನಲ್ಲಿರುವಾಗ ಔಪಚಾರಿಕ ಮತ್ತು ಯೋಗ್ಯ ಡ್ರೆಸ್‌‍ ಧರಿಸಿರಬೇಕು ಎಂದು ನೋಟೀಸ್‌‍ ಹೊರಡಿಸಿದೆ.

Ad
300x250 2

ವಿದ್ಯಾರ್ಥಿಗಳು ಕ್ಯಾಂಪಸ್‌‍ನಲ್ಲಿರುವಾಗ ಔಪಚಾರಿಕ ಮತ್ತು ಯೋಗ್ಯವಾದ ಉಡುಪನ್ನು ಧರಿಸಬೇಕು. ಅವರು ಹಾಫ್‌ ಶರ್ಟ್‌ ಅಥವಾ ಪೂರ್ಣ ಶರ್ಟ್‌ ಮತ್ತು ಪ್ಯಾಂಟ್‌ ಧರಿಸಬಹುದು. ಹುಡುಗಿಯರು ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದು. ವಿದ್ಯಾರ್ಥಿಗಳು ಧರ್ಮವನ್ನು ಬಹಿರಂಗಪಡಿಸುವ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ತೋರಿಸುವ ಯಾವುದೇ ಉಡುಗೆಯನ್ನು ಧರಿಸಬಾರದು.

ಜೀನ್ಸ್, ಟಿ- ಶರ್ಟ್‌ಗಳು, ಬಹಿರಂಗ ಉಡುಪುಗಳು ಮತ್ತು ಜೆರ್ಸಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕಾಲೇಜು ಗೇಟ್‌ನಲ್ಲಿ ನೇತು ಹಾಕಲಾದ ನೋಟಿಸ್‌‍ನಲ್ಲಿ ತಿಳಿಸಲಾಗಿದೆ. ಹಿಜಾಬ್‌‍, ಬುರ್ಕಾ, ನಕಾಬ್‌, ಸ್ಟೋಲ್‌ಗಳು, ಕ್ಯಾಪ್‌ಗಳು ಮತ್ತು ಬ್ಯಾಡ್‌್ಜಗಳನ್ನು ನೆಲ ಮಹಡಿಯಲ್ಲಿರುವ ಸಾಮಾನ್ಯ ಕೊಠಡಿಗಳಿಗೆ ಹೋಗುವುದರ ಮೂಲಕ ತೆಗೆದುಹಾಕಬಹುದು ಮತ್ತು ನಂತರ ಮಾತ್ರ ಕಾಲೇಜು ಕ್ಯಾಂಪಸ್‌‍ನಾದ್ಯಂತ ಚಲಿಸಬಹುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

Ad
Ad
Nk Channel Final 21 09 2023
Ad