News Karnataka Kannada
Friday, May 03 2024
ಯುಎಇ

ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಯುಎಇ ಸಮಿತಿ ನವೀಕರಣ, ಇಫ್ತಾರ್ ಸಂಗಮ ಕಾರ್ಯಕ್ರಮ

Uae
Photo Credit : News Kannada

ದುಬೈ : ಸಮನ್ವಯ ವಿದ್ಯಾ ಸಂಸ್ಥೆ ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ತೋಡಾರ್ ಇದರ ಯು ಎ ಇ ಸಮಿತಿ ನವೀಕರಣ ಹಾಗೂ ಇಫ್ತಾರ್ ಸಂಗಮ ಕಾರ್ಯಕ್ರಮವು ಹೋಟೆಲ್ ಲ್ಯಾಂಡ್ ಮಾರ್ಕ್ ಸಭಾಂಗಣದಲ್ಲಿ ನಡೆಯಿತು.

ಯುಎಇ ಸಮಿತಿ ಅಧ್ಯಕ್ಷರಾದ ಜನಾಬ್ ಅಬ್ದುಲ್ ಖಾದರ್ ಬೈತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲಿ ಹಸನ್ ಫೈಝಿ ಮಅ್ಬರಿರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು.

ಕಾರ್ಯಕ್ರಮವನ್ನು ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ ಉದ್ಘಾಟಿಸಿ ಮಾತನಾಡಿತ್ತಾ , ಶಂಸುಲ್ ಉಲಮಾ ಅರೇಬಿಕ್ ಸಂಸ್ಥೆ, ಅಲ್ಲಿನ ಕ್ಯಾಂಪಸ್ , ಹಾಗೂ ಶಿಸ್ತು ಬದ್ದ ಶಿಕ್ಷಣದ ಕುರಿತು ಹರ್ಷ ವ್ಯಕ್ತಪಡಿಸಿ, ಆಡಳಿತ ಸಮಿತಿಯ ವಿಶೇಷ ಮುತುವರ್ಜಿಯಿಂದಾಗಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಇದೀಗ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂಸ್ಥೆಯ ಮೇಲಿನ ಅಭಿಮಾನವನ್ನು ಹೆಚ್ಚಿಸಿದ್ದು , ಮುಂದೆಯೂ ಇನ್ನಷ್ಟು ಎತ್ತರದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಝರ್ ಹಂಡೇಲ್ ರವರು ಮಾತನಾಡುತ್ತಾ ಸಂಸ್ಥೆಯ ಕುರಿತು ವಿವರಿಸಿ ಪ್ರಸಕ್ತ ಕಾಲಘಟ್ಟಗಳಲ್ಲಿ ಸಮುದಾಯವು ಅನುಭವಿಸುತ್ತಿರುವ ಕಷ್ಟ , ವಿದ್ಯಾಭ್ಯಾಸದಲ್ಲಿ ಸಮುದಾಯವನ್ನು ತುಳಿಯುತ್ತಿರುವ ಇತರ ಶಕ್ತಿಗಳ ಮುಂದೆ ಇಂತಹ ಸಮನ್ವಯ ವಿದ್ಯಾ ಕೇಂದ್ರಗಳು ಅತ್ಯಗತ್ಯವಾಗಿದ್ದು , ಸಂಸ್ಥೆಯನ್ನು ಕಟ್ಟಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಮೇಲಿನ ಕರ್ತವ್ಯವಾಗಿದ್ದು ಸರ್ವರ ಸಹಕಾರವನ್ನು ಕೋರಿ ಅತಿಥಿಗಳನ್ನು ಸ್ವಾಗತಿಸಿದರು.

ನಂತರ ಜಾಬೀರ್ ಬೆಟ್ಟಂಪಾಡಿ. ಯವರು ಸಮಿತಿಯ ಕಾರ್ಯವೈಖರಿಗಳನ್ನೊಳಗೊಂಡ ವರದಿಯನ್ನು ಮಂಡಿಸಿ ಕೋಶಾಧಿಕಾರಿ ಲತೀಫ್ ಕೌಡಿಚ್ಚಾರ್ ಲೆಕ್ಕ ಪತ್ರಗಳನ್ನೊಳಗೊಂಡ ವಿವರಣೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕರವರು ಮಾತನಾಡುತ್ತಾ , ಇಂದು ಪ್ರತಿ ಕ್ಷೇತ್ರಗಳಲ್ಲೂ ನಮ್ಮ ಸಮುದಾಯದ ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿದ್ದು ಹಲವಾರು ಶೈಕ್ಷಣಿಕ ಕೇಂದ್ರ ಗಳು ತಲೆಯೆತ್ತುತ್ತಾ ಬಂದಿದೆ. ಆದರೂ ಇಂದು ಸಮುದಾಯದ ಕೆಲವು ನಾಮಧಾರಿಗಳು ತಪ್ಪುತ್ತಿದ್ದು , ಅಂತಹ ಯುವ ಜನತೆಗೆ ಸಮನ್ವಯ ವಿದ್ಯಾಕೇಂದ್ರಗಳು ಸಹಕಾರಿಯಾಗಲಿದ್ದು , ಅದರಲ್ಲಿ ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಕೂಡ ಒಂದಾಗಿದೆ. ಕೇವಲ ಧಾರ್ಮಿಕವಾಗಿ ಮಾತ್ರ ಪಂಡಿತರಾಗದೆ ಲೌಕಿಕ ಜ್ಞಾನವು ಅಗತ್ಯ. ಸಮಾಜವು ಇಂದು ತೀರಾ ಹದಗೆಡುತ್ತಿದ್ದು, ಸಮುದಾಯವು ಹಲವಾರು ದೌರ್ಜನ್ಯಗಳನ್ನೂ ಎದುರಿಸಬೇಕಾದ ಅಗತ್ಯವಿದೆ, ಆದ್ದರಿಂದ ತಮ್ಮಂತಹ ದೀನೀ ಸ್ನೇಹಿಗಳ ಬೆಂಬಲವಿದ್ದಲ್ಲಿ ಶಂಸುಲ್ ಉಲಮಾ ಕಾಲೇಜ್ ಗಳಂತಹ ಹತ್ತು ಹಲವು ಸಂಸ್ಥೆಗಳು ನಾನಾ ಕಡೆಗಳಲ್ಲಿ ಬೆಳೆಯುದಕ್ಕೆ ಸಾಧ್ಯ ಎಂದು ತಿಳಿಹೇಳುತ್ತಾ ಹಾಲಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚಿಸಲು ಅನುವು ಮಾಡಿಕೊಟ್ಟರು.

ನಂತರ ನೂರ್ ಮುಹಮ್ಮದ್ ನೀರ್ಕಜೆ ರವರು ನೂತನ ಸಮಿತಿ ರಚನಾ ನೇತೃತ್ವ ವಹಿಸಿ ಮಾತನಾಡುತ್ತಾ ಸಂಸ್ಥೆಯ ಬೆಳವಣಿಗೆಗೆ ಸರ್ವರೂ ಸಹಕರಿಸುವಂತೆ ಕೇಳಿಕೊಂಡು ನೂತನ ಸಮಿತಿ ಪಧಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಕ್ತ ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಆಡಳಿತ ಮ್ಯಾನೇಜರ್ ಇಸಾಕ್ ಹಾಜಿ ತೋಡಾರ್ ರವರು ಮಾತನಾಡುತ್ತಾ , ಸಂಸ್ಥೆಯ ಸಂಪೂರ್ಣ ವಿವರಣೆಗಳನ್ನೊಳಗೊಂಡು , ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದರು. ಸಂಸ್ಥೆಯಲ್ಲಿ ಇದೀಗ ಇನ್ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿದ್ದು ಶಿಷ್ಟು ಬದ್ದ , ಗುಣಮಟ್ಟದ ವಿಧ್ಯಾಭ್ಯಾಸವನ್ನು ಸಂಸ್ಥೆಯು ನೀಡುತ್ತಾ ಬಂದಿದೆ. ಇದೀಗ ಸಂಸ್ಥೆಯಿಂದ ಹಲವಾರು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾಕ್ಕೆ ತೆರಳಿದ್ದು ಫೈಝಿ ಬಿರುದಿನೊಂದಿಗೆ ಕರ್ಮ ರಂಗದಲ್ಲಿ ದೀನೀ ದವಾ ನಡೆಸುತ್ತಿದ್ದಾರೆ. ಅಲ್ಲದೆ ಸಂಸ್ಥೆಯ ಅದೀನದಲ್ಲಿ ಸಿವಿಲ್ ಸರ್ವಿಸ್ ಕೋರ್ಸ್, ಹನಫಿ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶೈಕ್ಷಣಿಕ ಕೇಂದ್ರ , ಸುಸಜ್ಜಿತ ಮಸೀದಿ ಇದ್ದು, ಇದರ ಕಾರ್ಯ ನಿರ್ವಹಣೆಗಾಗಿ ಯಾವುದೇ ಸ್ಥಿರ ವರಮಾನ ವಿಲ್ಲದಿದ್ದರೂ ತಮ್ಮಂತಹ ದೀನೀ ಪೋಷಕರ ಸಹಕಾರದಿಂದ ಯಶಸ್ಸಿನೊಂದಿಗೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಮುಂದೆಯೂ ತಮ್ಮ ಸಹಕಾರ ಅತ್ಯಗತ್ಯವಾಗಿದ್ದು ಸಹಕರಿಸುವಂತೆ ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಪ್ರಸಕ್ತ ಸಾಲಿನ ಯು ಎ ಇ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಗೊಂಡ ಸಲೀಂ ಮೂಡಬಿದ್ರೆ ರವರು ಮಾತನಾಡುತ್ತಾ , ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಹರ್ಷ ವ್ಯಕ್ತ ಪಡಿಸಿ ಸಂಸ್ಥೆಯನ್ನು ಇನ್ನಷ್ಟು ಎತ್ತರದಲ್ಲಿ ಬೆಳೆಸಲು ತಾವೆಲ್ಲರೂ ಸಹಕರಿಸುವಂತೆ ವಿನಂತಿಸಿಕೊಂಡು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅಥಿತಿ ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ ರವರು ಮಾತನಾಡುತ್ತಾ, ವಿಧ್ಯಾಭ್ಯಾಸಕ್ಕೆ ಇಸ್ಲಾಮ್ ಧರ್ಮವು ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, ಇಂದು ನಮ್ಮ ಸಮುದಾಯದ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಗೈಯುತ್ತಿದ್ದು, ಇದರಿಂದಾಗಿ ಕೆಲವರ ಬುಡ ಅಲುಗಾಡತೊಡಗಿದ್ದು, ಮುಸ್ಲಿಂ ಸಮುದಾಯವನ್ನು ವಿಧ್ಯಾಭ್ಯಾಸದಿಂದ ವಂಚಿತರಾಗಿಸುವ ಉದ್ದೇಶದಿಂದ ನಾನಾ ಕಾರಣಗಳನ್ನು ಹುಟ್ಟು ಹಾಕಿ ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದು, ಇಂತಹ ಸಂಧರ್ಭಗಳಲ್ಲಿ ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಗಳಂತಹ ಸಮನ್ವಯ ವಿದ್ಯಾ ಕೇಂದ್ರಗಳನ್ನು ಬೆಳೆಸಬೇಕಾಗಿರುವುದು ಇಂದಿನ ಕಾಲದ ಬೇಡಿಕೆಯಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ನಂತರ ಅತಿ ಥಿ ಗಳಾಗಿ ಆಗಮಿಸಿದ , ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ , ಅಶ್ರಫ್ ಷಾ ಮಾಂತೂರ್ , ಯೂಸುಫ್ ಹಾಜಿ ಬೇರಿಕೆ, ಶಂಸುದ್ದೀನ್ ಸೂರಲ್ಪಾಡಿ , ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ , ಷರೀಫ್ ಕಾವು , ಅಲಿ ಹಾಸನ್ ಫೈಝಿ , ಬದರುಲ್ ಮುನೀರ್ ಫೈಝಿ , ಬದ್ರುದ್ದೀನ್ ಹೆಂತಾರ್ , ಅಬ್ದುಲ್ ಸಲಾಂ ಬಪ್ಪಳಿಗೆ , ಅಬ್ದುಲ್ ಲತೀಫ್ ಕೌಡಿಚ್ಚಾರ್, ನವಾಝ್ ಬಿಸಿರೋಡ್ ಮೊದಲಾದವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೆ ಸಂಧರ್ಭದಲ್ಲಿ ಇಫ್ತಾರ್ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಂಸುಲ್ ಉಲಮಾ ಸಮಿತಿಯ ವಿವಿಧ ನೇತಾರರು ಭಾಗವಹಿಸಿ ಸಹಕರಿಸಿದರು

2022-23 ಸಾಲಿನ ಪಧಾಧಿಕಾರಿಗಳು

ಗೌರವ ಸಲಹೆಗಾರರು

ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ, ಯೂಸುಫ್ ಹಾಜಿ ಬೆರಿಕೆ, ಅಬ್ದುಲ್ ಸಲಾಂ ಬಪ್ಪಳಿಗೆ, ಮಹಮ್ಮದ್ ಮಾಡಾವು, ಅಶ್ರಫ್ ಷಾ ಮಾಂತೂರ್ ಶಂಸುದ್ದೀನ್ ಸೂರಲ್ಪಾಡಿ, ಷರೀಫ್ ಕಾವು, ನೂರ್ ಮುಹಮ್ಮದ್ ನೀರ್ಕಜೆ, ಲತೀಫ್ ಕೌಡಿಚ್ಚಾರ್, ಬದ್ರುದ್ದೀನ್ ಹೆಂತಾರ್

ಗೌರವಾಧ್ಯಕ್ಷರು : ಸಯ್ಯದ್ ಆಸ್ಕರ್ ಅಲಿ ತಂಙಲ್ ಕೋಲ್ಪೆ

ಅಧ್ಯಕ್ಷರು: ಸಲೀಂ ಮೂಡಬಿದ್ರಿ

ಉಪಾಧ್ಯಕ್ಷರು: ಹಾಜಿ ಅಬ್ದುಲ್ ಲತೀಫ್ ಮದರ್ ಇಂಡಿಯಾ, ಸುಲೈಮಾನ್ ಮೌಲವಿ ಕಲ್ಲೇಗ, ರಿಯಾಝ್ ಉಲ್ತೂರ್, ಷರೀಫ್ ಕೊಡಿನೀರ್

ಕಾರ್ಯಾಧ್ಯಕ್ಷರು: ಅಬ್ದುಲ್ ಖಾದರ್ ಬೈತಡ್ಕ

ಪ್ರಧಾನ ಕಾರ್ಯದರ್ಶಿ: ಅಝರ್ ಹಂಡೇಲ್

ಕಾರ್ಯದರ್ಶಿ: ಜಾಬೀರ್ ಬೆಟ್ಟಂಪಾಡಿ, ನವಾಝ್ ಬಿಸಿ ರೋಡ್, ಅಶ್ರಫ್ ಪರ್ಲಡ್ಕ

ಸಂಘಟನಾ ಕಾರ್ಯದರ್ಶಿ: ನಿಝಾಂ ತೋಡಾರ್ , ನಾಸೀರ್ ಬಪ್ಪಳಿಗೆ .

ಕೋಶಾಧಿಕಾರಿ: ಅಝೀಝ್ ಸೊಂಪಾಡಿ

ಲೆಕ್ಕ ಪರಿಶೋಧಕರು: ಸಿರಾಜ್ ಬಿಸಿ ರೋಡ್

ಸಂಚಾಲಕರು: ಉಸ್ಮಾನ್ ಮರೀಲ್, ಇಸ್ಮಾಯಿಲ್ ತಿಂಗಳಾಡಿ, ಇಸಾಕ್ ಕುಡ್ತಮುಗೇರ್, ಜಾಬೀರ್ ಬಪ್ಪಳಿಗೆ, ಶಾಫಿ ಪೆರುವಾಯಿ, ನಿಝಾಂ ಉಲ್ತೂರ್

ಮೂನಿಷ್ ತೋಡಾರ್, ಫರ್ವೇಝ್ ಹಳೆಯಂಗಡಿ, ಅನೀಸ್ ಹಂಡೇಲ್

ಪತ್ರಿಕಾ ಪ್ರತಿನಿಧಿ: ಅಲಿ ಹಸನ್ ಫೈಝಿ, ಬದರುಲ್ ಮುನೀರ್ ಫೈಝಿ, ಫೈಝಲ್ ಹಂಡೆಲ್

ಕಾರ್ಯಕಾರಿ ಸಮಿತಿ ಪಧಾಧಿಕಾರಿಗಳು: ತಬ್ಸೀರ್ ಕುಲಶೇಕರ್, ಅಸೀಫ್ ಮರೀಲ್, ರಹ್ಮಾನ್ ಪೆರಾಜೆ, ರಫೀಕ್ ಸುರತ್ಕಲ್, ರಹ್ಮಾನ್ ಸಜಿಪ, ಸಾಜಿದ್ ಬಜ್ಪೆ, ನವಾಝ್ ತೋಡಾರ್, ಶಬೀರ್ ಸಕಲೇಶ್ಪುರ, ಶಾಹುಲ್ ಬಿಸಿ ರೋಡ್, ಇಫ್ತಿಕಾರ್ ಕಣ್ಣೂರ್, ತಾಹಿರ್ ಹೆಂತಾರ್, ಅಲ್ತಾಫ್ ಮುಸ್ಲಿಯಾರ್ ತೋಡಾರ್, ನಾಸೀರ್ ತೋಡಾರ್.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು