ಸೌದಿ ಅರೇಬಿಯಾ, ಮಾ.16: ಸೌದಿ ಅರೇಬಿಯಾ ಮಂಗಳೂರು ಅಸೋಸಿಯೇಶನ್ 15ನೇ ವಾರ್ಷಿಕೋತ್ಸವದ ಪ್ರಯುಕ್ತ “ಗಮ್ಮತ್” ಕಾರ್ಯಕ್ರಮ ಮಾ.16ರಂದು ದಮ್ಮಮ್ ಕ್ರಿಸ್ಟಲ್ ಹಾಲ್ ನಲ್ಲಿ ಸಂಜೆ 7ಕ್ಕೆ ನಡೆಯಲಿದೆ ಎಂದು ಅಧ್ಯಕ್ಷ ಸತೀಶ್ ಕುಮಾರ್ ಬಜಾರ್, ಉಪಾಧ್ಯಕ್ಷ ಗೋಪಾಲ್ ಶೆಟ್ಟಿ, ಜನರಲ್ ಸೆಕ್ರೆಟರಿ ಅಮೀರ್ ಹುಸೈನ್, ಸಲಹಾ ಸಮಿತಿಯ ಮುಖ್ಯಸ್ಥ ರವಿ ಕರ್ಕೇರ ತಿಳಿಸಿದರು.
ಈ ವೇಳೆ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುತ್ತದೆ. ಹೊಂಗಿರಣ ಎಂಬ ಮ್ಯಾಗಜಿನ್ ಬಿಡುಗಡೆ ಆಗಲಿದೆ. 2023-2024ನೇ ವರ್ಷದ ಹೊಸ ಸಮಿತಿಯನ್ನು ರಚಿಸಲಾಗುವುದು. ಸಂಜೆ ಆಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.