ಚಿಕಾಗೋ: ಅಮೆರಿಕಾದ ಚಿಕಾಗೋದಲ್ಲಿ ನೂತನವಾಗಿ ನಿರ್ಮಿಸಲಾದ ಉಡುಪಿ ಪುತ್ತಿಗೆ ಮಠದ ಹನ್ನೊಂದನೆಯ ಶಾಖೆ ಶ್ರೀಕೃಷ್ಣ ಬೃಂದಾವನಕ್ಕೆ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ವಿಶ್ವ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಶ್ರೀಪಾದರು ಶಿಕಾಗೋದ ಭಾರತೀಯ ಭಕ್ತರಿಗೆ ವಿಶೇಷ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಚಿಕಾಗೋ ಸಮಯಕ್ಕೆ ಸರಿಯಾದಂತೆ ನಿರ್ಮಿಸಿದ ದೃಗ್ಗಣಿತ ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು. ನೂರಾರು ಭಕ್ತರು ಪಾಲ್ಗೊಂಡು ಶ್ರೀಪಾದರ ಆಶೀರ್ವಾದ ಪಡೆದರು.