ಮುಂಬೈ: ನೀಲಿ ಚಿತ್ರಗಳ ದಂಧೆ ಆರೋಪದಡಿಯಲ್ಲಿ ಬಂಧಿಯಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ಮುಂಬೈ ಹೈಕೋರ್ಟ್ ವಿಚಾರಣೆ ನಡೆಸಲಿದೆ.
ಈ ಮೂಲಕ ಇಂದು ಪೊಲೀಸ್ ಕಸ್ಟಡಿ ಕೊನೆಗೊಳ್ಳಲಿದೆ. ನೀಲಿಚಿತ್ರಗಳ ತಯಾರಿಕೆ ಹಾಗೂ ಭಿತ್ತರಿಕೆ ಆರೋಪದಡಿಯಡಿಯಲ್ಲಿ 45 ವರ್ಷದ ರಾಜ್ ಕುಂದ್ರಾರನ್ನು ಜುಲೈ 19 ರಂದು ಪೊಲೀಸರು ಬಂಧಿಸಿದ್ದರು.
ಇದರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ 11 ಜನರನ್ನು ಬಂಧಿಸಲಾಗಿದೆ.