ಅಮೇರಿಕಾ: ಆಸ್ಕರ್ ಅವಾರ್ಡ್ ಎಂಬುದು ಒಂದು ಪ್ರತಿಷ್ಟಿತ ಅವಾರ್ಡ್ ಎಂದು ಎಲ್ಲರಿಗೂ ತಿಳಿದಿದೆ ಆದರೆ ಹಾಲಿವುಡ್ ನ ಆಸ್ಕರ್ ಅವಾರ್ಡ್ ಸಮಾರಂಭ ಮುನ್ನವೇ ಗಾಜಾ ಬೆಂಬಲಿಗರು ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಸಮಾರಂಭಕ್ಕೆ ಕೆಲವು ಅಡೆತಡೆಗಳು ಕಾಣಿಸಿಕೊಂಡವು. ಸಮಾರಂಭವು ಸಮಕ್ಕೆ ಆರಂಭವಾಗದೆ 5 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು.
ಇಂತಹ ಒರತಿಷ್ಟಿತ ಆಸ್ಕರ್ ಅವಾರ್ಡ್ ಸಮಾರಂಭ ದಲ್ಲಿ ಪ್ರತಿಭಟನೆ ಮಾಡಲು ಕಾರಣವೆನೆಂದು ನೋಡುವುದಾರೆ ಇಸ್ರೇಲ್ ಮತ್ತು ಹಮಾಸ್ ಮದ್ಯೆ ಯುದ್ಧ ನಡೆಯುತ್ತಿದ್ದು ಯುದ್ಧಕ್ಕೆ ಕದನ ವಿರಾಮ ಘೋಷಿಸಬೇಕು ಎಂದು ಫಲಕಗಳನ್ನು ಹಿಡಿದು ಪ್ರತಿಭಟನೆಗೆ ಆರಂಭಿಸಿದ್ದಾರೆ. ಇದರಿಂದ ರಸ್ತೆಗಳು ಬ್ಲಾಕ್ ಆಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಪ್ರತಿಭಟನೆಯಲ್ಲಿ ಸುಮಾರು 500 ರಿಂದ 600 ಮಂದಿ ಭಾಗಿಯಾಗಿದ್ದರು ಹಾಗೂ ಡಾಲ್ಬಿ ಥೀಯೆಟರ್ನ ದಾರಿಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಿದ್ದರು. ಇವರು ಪ್ಯಾಲೆಸ್ಟೀನ್ ಬೆಂಬೆಲಿಗರು ಎಂದು ಅಮೆರಿಕಾದ ಲಾಸ್ ಏಂಜಲೀಸ್ ಪೊಲೀಸರು ಮಾಹಿತಿ ನೀಡಿದ್ದಾರೆ.