News Karnataka Kannada
Sunday, April 28 2024
ಅಮೇರಿಕಾ

ಕೊಲೆ ಮಾಡುವಾಗ ಗಾಂಜಾ ಅಮಲಿನಲ್ಲಿದ್ದಳೆಂದು ಯುವತಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಪ್ರಿಯಕರನನ್ನು ಕೊಂದ ಯುವತಿ ಕೊಲೆ ಮಾಡುವಾಗ ಗಾಂಜಾದ ನಶೆಯಲ್ಲಿದ್ದಳೆಂಬ ಕಾರಣಕ್ಕೆ ನ್ಯಾಯಾಲಯ ಆಕೆಯನ್ನು ಖುಲಾಸೆ ಗೊಳಿಸಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.
Photo Credit : News Kannada

ಅಮೆರಿಕಾ: ಪ್ರಿಯಕರನನ್ನು ಕೊಂದ ಯುವತಿ ಕೊಲೆ ಮಾಡುವಾಗ ಗಾಂಜಾದ ನಶೆಯಲ್ಲಿದ್ದಳೆಂಬ ಕಾರಣಕ್ಕೆ ನ್ಯಾಯಾಲಯ ಆಕೆಯನ್ನು ಖುಲಾಸೆ ಗೊಳಿಸಿರುವ ಘಟನೆ ಅಮೇರಿಕಾದಲ್ಲಿ ನಡೆದಿದೆ.

ಬ್ರಿಯಾನಾ ಸ್ಪೇಸ್ ಎಂಬ ಯುವತಿ ೨೦೧೮ರಲ್ಲಿ ತನ್ನ ಗೆಳೆಯ ಚಾಡ್ ಒಮೆಲಿಯಾನನ್ನು ಚಾಕುವಿನಿಂದ ೧೦೮ ಬಾರಿ ಇರಿದು ಹತ್ಯ ಮಾಡಿದ್ದಳು. ಅದಕ್ಕಾಗಿ ಅವಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನೂ ನೀಡಲಾಗಿತ್ತು. ಆದರೆ ಕೃತ್ಯ ಎಸಗುವ ವೇಳೆಯಲ್ಲಿ ಬ್ರಿಯಾನಾ ಗಾಂಜಾದ ಅಮಲಿನಲ್ಲಿದ್ದಳು ಎಂದು ಅವಳನ್ನು ಬಂಧನಮುಕ್ತಗೊಳಿಸಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡ್ರಗ್ಸ್ ಅಮಲಿನಲ್ಲಿದ್ದಾಗ ಮಾಡುವ ಕೃತ್ಯ ಉದ್ದೇಶಪೂರ್ವಕವಾದುದಲ್ಲ ಎಂದು ಪರಿಗಣಿಸಲಾಗುತ್ತದೆ. ಇಂತಹ ಅಪರಾಧಿಗಳ ವಿಚಾರಣೆಯ ವೇಳೆ ಅವರ ಹಿನ್ನಲೆ, ಬಾಲ್ಯ ಇತ್ತಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ತನ್ನ ಪ್ರಿಯಕರನನ್ನು ಕೊಂದ ಬ್ರಿಯಾನಾ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು, ಹಾಗು ತಾನು ಕೊಲೆ ಮಾಡಿದ್ದಾಗಿ ಗೆಳೆಯನ ಮನೆಯವರ ಮುಂದೆ ಹೇಳಿ ಗೋಳಾಡಿದ್ದಳು. ಬಂಧನದ ಸಮಯದಲ್ಲಿ ಆಕೆ ಆಘಾತಕ್ಕೊಳಗಾಗಿದ್ದು, ಮಾನಸಿಕ ಸ್ಥಿತಿ ಹದಗೆಟಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು