ಅಮೆರಿಕ: ಜಾರ್ಜಿಯಾದ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸಗಾರನಾಗಿದ್ದ ಭಾರತದ ವಿವೇಕ್ ಸೈನಿ ಎಂಬ ಎಂ.ಬಿ.ಎ ವಿದ್ಯಾರ್ಥಿಯನ್ನು ವ್ಯಸನಿಯೊಬ್ಬ ಹತ್ಯೆಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿರಾಶ್ರಿತನಾಗಿದ್ದ ಜ್ಯುಲಿಯನ್ ಫಾಲ್ಕರ್ ಎಂಬ ಮಾದಕ ವ್ಯಸನಿಗೆ ತಿನ್ನಲು ಆಹಾರ ಹಾಗು ಹೊದೆಯಲು ಜಾಕೆಟ್ ನೀಡಿದ್ದ ವಿವೇಕ್, ಅವುಗಳನ್ನು ಬಿಟ್ಟಿಯಾಗಿ ಕೊಡುವುದನ್ನು ಮುಂದುವರಿಸಲು ನಿರಾಕರಿಸಿದ ಬೆನ್ನಲ್ಲೇ ಅವನನ್ನು ಕೊಲ್ಲಲಾಗಿದೆ.
ಮನೆಗೆ ತೆರಳುವ ವೇಳೆ ವಿವೇಕ್ ನ ಮೇಲೆ ದಾಳಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವನ ತಲೆ ಹಾಗು ಮುಖಕ್ಕೆ ಸುತ್ತಿಗೆಯಿಂದ ೫೦ಕ್ಕೂ ಹೆಚ್ಚು ಬಾರಿ ಹೊಡೆಯುವ ಜ್ಯುಲಿಯನ್ ನನ್ನು ಕಾಣಬಹುದಾಗಿದೆ.
ಹರಿಯಾಣದ ಭಗ್ವಾನ್ಪುರ್ ನಿವಾಸಿಯಾಗಿದ್ದ ವಿವೇಕ್ ಸೈನಿ ಜ.೨೬ರಂದು ಭಾರತಕ್ಕೆ ಮರಳಲಿದ್ದ.