News Karnataka Kannada
Thursday, May 09 2024
ಅಮೇರಿಕಾ

ಸ್ಟಾಫರ್ಡ್ ಮೇಯರ್ ಆಗಿ ಭಾರತೀಯ-ಅಮೆರಿಕನ್ ಪ್ರಮಾಣ ವಚನ ಸ್ವೀಕಾರ

Indian-American
Photo Credit :

ನ್ಯೂಯಾರ್ಕ್: ಕೇರಳದ ಕೆನ್ ಮ್ಯಾಥ್ಯೂ ಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಟಾಫರ್ಡ್ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಭಾರತೀಯ-ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ಟಾಫರ್ಡ್ ಸಿಟಿ ಕೌನ್ಸಿಲ್ನ ಮಾಜಿ ಸದಸ್ಯ ಮ್ಯಾಥ್ಯೂ, ಈ ತಿಂಗಳು ನಡೆದ ಚುನಾವಣೆಯಲ್ಲಿ ಹಾಲಿ ಮೇಯರ್ ಸೆಸಿಲ್ ವಿಲ್ಲೀಸ್ ಅವರನ್ನು 16 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಫೋರ್ಟ್ ಬೆಂಡ್ ಸ್ಟಾರ್ ವರದಿ ಮಾಡಿದೆ. ಮಿಸೌರಿ ನಗರದ ಮೇಯರ್ ರಾಬಿನ್ ಎಲಕಾಟ್ ಅವರು ಭಾರತೀಯ-ಅಮೆರಿಕನ್ ಆಗಿದ್ದು, ಅವರ ಕುಟುಂಬ ಸದಸ್ಯರು ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೆನ್ ಮ್ಯಾಥ್ಯೂ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಮೆರಿಕದ ಫೋರ್ಟ್ ಬೆಂಡ್ ಕೌಂಟಿ ನ್ಯಾಯಾಧೀಶ ಕೆ.ಪಿ.ಜಾರ್ಜ್, ‘ಸ್ಟಾಫರ್ಡ್ ಮೇಯರ್ ಆಗಿ ಆಯ್ಕೆಯಾದ ಕೆನ್ ಮ್ಯಾಥ್ಯೂ ಅವರಿಗೆ ಅಭಿನಂದನೆಗಳು. ಇಂದು ಸಂಜೆ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಸಂತೋಷವಾಗಿದೆ. ಅವರ ಈ ಪ್ರಮುಖ ಹುದ್ದೆಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಟೆಕ್ಸಾಸ್ ಪ್ರತಿನಿಧಿಗಳಾದ ರಾನ್ ರೆನಾಲ್ಡ್ಸ್ ಮತ್ತು ಸುಲೇಮಾನ್ ಲುಲಾನಿ ಮತ್ತು ಮಿಸ್ಸೌರಿ ನಗರದ ಮಾಜಿ ಮೇಯರ್ ಓವನ್ ಅಲೆನ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಮ್ಯಾಥ್ಯೂ ಅವರನ್ನು ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು