News Karnataka Kannada
Saturday, May 04 2024
ವಿಶೇಷ

ಚಿತ್ರ ರಚಿಸಿ ಪರಿಸರ ಪ್ರಜ್ಞೆ ಮೂಡಿಸಿದ ವಿದ್ಯಾರ್ಥಿಗಳು

Students who created a picture and created environmental awareness
Photo Credit : By Author

ಮೈಸೂರು: ಎಸೆದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿ ಗಿಡಗಳನ್ನು ಬೆಳೆಸುತ್ತಿರುವ ವಿದ್ಯಾರ್ಥಿಗಳು…… ಮಲಿನಗೊಂಡ ನೀರನ್ನು ಕಂಡು ಅಳುತ್ತಿರುವ ಜಲಚರಗಳು… ಹಸುವಿನ ದೇಹದ ತುಂಬಾ ಪ್ಲ್ಲಾಸ್ಟಿಕ್… ಮಾನವನ ಹೃದಯದಲ್ಲೂ ಪ್ಲಾಸ್ಟಿಕ್… ಇವೆಲ್ಲ ಕಂಡುಬಂದಿದ್ದು ಮಕ್ಕಳ ಚಿತ್ರ ರಚನೆ ಸ್ಪರ್ಧೆಯಲ್ಲಿ.

ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಸಲುವಾಗಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರ್ ಸೈನ್ಸ್ ಫೌಂಡೇಷನ್ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ವಿಷಯ ಕುರಿತು ಚಿತ್ರ ರಚನೆ ಸ್ಪರ್ಧೆಯನ್ನು ಬೋಗಾದಿಯ ಹರಿವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಮೂರು ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 5 ರಿಂದ ಪದವಿಪೂರ್ವದ ವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೈಸೂರಿನ ವಿವಿಧ ಶಾಲೆಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಕೇವಲ ಭಾಷಣಗಳಿಂದ ತರಲು ಸಾಧ್ಯವಿಲ್ಲ, ಮಕ್ಕಳಿಗೆ ಇಷ್ಟವಾಗುವ ಹಲವು ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಪರಿಸರ ಪ್ರಜ್ಞೆ ಬೆಳೆಸಬಹುದು. ಅದರಲ್ಲಿ ಚಿತ್ರ ರಚನೆಯೂ ಒಂದು ಎಂದು ಹರಿವಿದ್ಯಾಲಯದ ಕಾರ್ಯದರ್ಶಿ ಭಗವಾನ್ ಅಭಿಪ್ರಾಯ ಪಟ್ಟರು. ಮಕ್ಕಳ ಕ್ರಿಯಾಶೀಲ ಆಲೋಚನೆಗಳು ವ್ಯಕ್ತಪಡಿಸಲು ಚಿತ್ರಕಲೆ ಒಂದು ಉತ್ತಮ ಕಲೆ ಎಂದರು.

5 ರಿಂದ 8ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಾವನಿ ಎಚ್.ಪಿ 6ನೇತರಗತಿ, ಕ್ಯಾಪಿಟಲ್ ಪಬ್ಲಿಕ್ ಶಾಲೆ, ದ್ವಿತೀಯ ಸ್ಥಾನ ವೇದಶ್ರೀ 6ನೇತರಗತಿ, ಸೆಂಟ್ ಜೋಸೆಫ್ ಸೆಂಟ್ರಲ್ ಶಾಲೆ, ಸಮಾದಾನಕರ ಬಹುಮಾನವನ್ನು ಕ್ಷಿತಿ ಎಸ್ ಪಾಟೀಲ್, ಎಸ್.ಜೆ.ಸಿ.ಎಸ್ ಶಾಲೆ ಮತ್ತು ದ್ರಿತಿ ವಿ ಎಸ್.ಜೆ.ಸಿ.ಎಸ್ ಶಾಲೆ ರವರು ಪಡೆದುಕೊಂಡರು ಹಾಗೆ 9ರಿಂದ 12ನೇ ತರಗತಿ ವಿಭಾಗದಲ್ಲಿ ಪ್ರಥಮ ಸ್ಥಾನ ದೀಪಶ್ರೀ .ವಿ 9ನೇ ತರಗತಿ ಸೆಂಟ್ ಜೋಸೆಫ್ ಪ್ರೌಢಶಾಲೆ, ದ್ವಿತೀಯ ಸ್ಥಾನ ನಿಖಿತ ಸಿ.ಪಿ, 9ನೇ ತರಗತಿ, ಕ್ರೆöÊಸ್ತ್ ಪಬ್ಲಿಕ್ ಶಾಲೆ, ಸಮಾದಾನಕರ ಬಹುಮಾನವನ್ನು ಸೌಜನ್ಯ ಬಿ.ಎಚ್, 9ನೇತರಗತಿ, ಸೆಂಟ್ ಜೋಸೆಫ್ ಸೆಂಟ್ರಲ್ ಶಾಲೆ ಮತ್ತು ದಿಶಾ ವಿನೋದ್, 8ನೇತರಗತಿ ರವರು ಪಡೆದುಕೊಂಡರು. ಪದವಿಪೂರ್ವ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಾಕ್ಷಿ ಕೆ, ಪ್ರಥಮ ಪಿಯುಸಿ, ಪ್ರಮತಿ ಹಿಲ್ ವ್ಯೂ ಅಕಾಡೆಮಿ, ದ್ವಿತೀಯ ಸ್ಥಾನವನ್ನು ಎಮ್.ಆರ್.ಕುಮಾರ್ ನಾಯಕ್ ಪ್ರಥಮ ಪಿಯುಸಿ, ಮರಿಮಲ್ಲಪ್ಪ ಕಾಲೇಜ್ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಎಂ.ಎಸ್.ಎಫ್ ಅಧ್ಯಕ್ಷರಾದ ಸಿ.ಕೃಷ್ಣೇಗೌಡ, ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್, ಸಿ.ಪುರಂದರ್, ಶ್ರೀಮತಿ ಎಚ್.ಎಸ್.ಮಂಜುಳ, ಹರಿವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು