News Karnataka Kannada
Wednesday, April 24 2024
Cricket
ಮೈಸೂರು

ಸಮಾನತೆಯ ಸಂದೇಶ ಸಾರಿದ ಬಸವಣ್ಣ: ಶಾಸಕ ಜಿ.ಟಿ.ದೇವೆಗೌಡ

Basavanna preached the message of equality: MLA GT Deve Gowda
Photo Credit : By Author

ಮೈಸೂರು: ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲರಿಗೂ ಸ್ಥಾನಮಾನ ನೀಡುವ ಮೂಲಕ ಸಮಾನತೆಯ ಸಂದೇಶ ಸಾರಿದರು ಎಂದು ಶಾಸಕ ಜಿ.ಟಿ.ದೇವೆಗೌಡ ಅಭಿಪ್ರಾಯಪಟ್ಟರು.

ಮೈಸೂರು ಶರಣ ಮಂಡಳಿ ವತಿಯಿಂದ ನಗರದ ರಾಜೇಂದ್ರ ಭವನದಲ್ಲಿ ಬಸವ ಜಯಂತಿ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಕಟ್ಟಕಡೆಯ ವ್ಯಕ್ತಿಯ ಉನ್ನತಿಗಾಗಿ ದುಡಿಯುತ್ತಿದ್ದ ಎಲ್ಲಾ ವರ್ಗದ ಸುಧಾರಕರನ್ನು ಅನುಭವ ಮಂಟಪ ಎಂಬ ಒಂದೇ ವೇದಿಕೆಯಡಿ ತರುವಲ್ಲಿ ಬಸವಣ್ಣ ಯಶಸ್ವಿಯಾದರು. ಹನ್ನೆರಡನೇ ಶತಮಾನದಲ್ಲೇ ಮಹಿಳೆಯರಿಗೆ ಉನ್ನತ ಸ್ಥಾನ ದೊರಕಬೇಕು ಎಂದು ಧ್ವನಿ ಎತ್ತಿ ಸಾಮಾಜಿಕ ಹರಿಕಾರ ಎಂದು ಕರೆಸಿಕೊಂಡರು. ದುರಂತವೆಂದರೆ, ಅವರ ವಿಚಾರಗಳನ್ನು ಗುರುತಿಸುವಲ್ಲಿ ಹಾಗೂ ಅರ್ಥ ಮಾಡಿಕೊಳ್ಳುವಲ್ಲಿ ಇಂದಿಗೂ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಶಾಸಕ ಡಾ.ತಿಮ್ಮಯ್ಯ ಮಾತನಾಡಿ, ಪ್ರಪಂಚಕ್ಕೆ ಬಸವಣ್ಣನ ತತ್ವಗಳು, ವಚನಗಳ ಕಾಣಿಕೆ ಅಮೋಘ. ಅದರೆ, ಬೆರಳೆಣಿಕೆ ಮಂದಿ ಮಾತ್ರ ಅವರ ತತ್ವಗಳನ್ನು ಮೈಗೂಡಿಸಿಕೊಂಡಿದ್ದಾರೆ. ಬಸವಣ್ಣ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದರೂ ಸಮಾಜದ ಅಸಮಾನತೆ ಅಳಿಸಲು ಶ್ರಮಿಸಿದರು. ಆದರೆ ಇಂದಿಗೂ ನಮ್ಮಲಿ ಜಾತಿ ಪ್ರವೃತ್ತಿ ಮಾತ್ರ ಕಡಿಮೆ ಆಗಿಲ್ಲ. ಇವ ನಮ್ಮವ, ಇವ ನಮ್ಮವ ಎಂದು ಹೇಳುತ್ತಲೇ ಆತ ಯಾವ ಜಾತಿ ಎಂದು ಕೇಳುವ ಪರಿಸ್ಥಿತಿ ಇದೆ. ಜಗಜ್ಯೋತಿ ಬಸವಣ್ಣ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯರಂತರ ಕಾಯಕ ಜೀವಿಗಳು ನಮಗೆ ಆದರ್ಶವಾಗಬೇಕು ಎಂದು ಹೇಳಿದರು.

ಬಸವ ರತ್ನ ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಮಾತನಾಡಿ, ಬಸವಣ್ಣನ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಪತ್ರಕರ್ತರ ಕೆಲಸ ಸಾಧಕರ ಬಗ್ಗೆ ಜಗತ್ತಿಗೆ ತಿಳಿಸುವುದು ಅಷ್ಟೇ. ಆದರೆ, ನಂಜಪ್ಪರಂತಹ ಹಿರಿಯರ ಜೊತೆ ಸನ್ಮಾನಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ದಲಿತಪರ, ಬಂಡಾಯ, ಕನ್ನಡಪರ ಹೋರಾಟ ಹಾಗೂ ವಚನ ಚಳವಳಿ ಎಂದರೆ ನನಗೆ ಹೆಚ್ಚು ಆಸಕ್ತಿ. ನಾನು ಕೆಜಿಎಫ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಈ ಎಲ್ಲಾ ಹೋರಾಟಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು, ಮೂಗೂರು ನಂಜುಂಡಸ್ವಾಮಿಯಂತಹ ಅನೇಕ ಹೋರಾಟಗಾರರು ಕನ್ನಡ ಭಾಷೆಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು