Bengaluru 22°C
Ad

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ನವೀಕರಿಸಿದ ಕೀಲು ಮತ್ತು ಮೂಳೆ ಚಿಕಿತ್ಸಾ ಹೊರ ರೋಗಿ ವಿಭಾಗದ ಉದ್ಘಾಟನೆ

Kmc (1)

ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ನವೀಕರಿಸಿದ ಕೀಲು ಮತ್ತು ಮೂಳೆ ಚಿಕಿತ್ಸಾ ಹೊರ ರೋಗಿ ವಿಭಾಗದ ಉದ್ಘಾಟನೆಯನ್ನು 2024 ರ ಜೂನ್ 20 ರಂದು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಉಪಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ. ಉದ್ಘಾಟಿಸಿದರು. ಉದ್ಘಾಟಣೆಯ ನಂತರ ಸಭಾಕಾರ್ಯಕ್ರಮವು ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಟವರ್ 2 ಇಲ್ಲಿನ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯಿತು.
Kmc (5)

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನ ವಿಭಾಗದ ಡಾ. ಶರತ್ ಕುಮಾರ್ ರಾವ್ ಕೆ. ಮತ್ತು ಗೌರವ ಅತಿಥಿಗಳಾಗಿ ನಿಟ್ಟೆ ವಿಶ್ವವಿಧ್ಯಾಲಯದ ಪ್ರೊ ಚಾನ್ಸೆಲ್ಲರ್ ಡಾ. ಎಂ. ಶಾಂತರಾಮ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ನಂತರ ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನು ನೀಡಿದರು. ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಆತ್ಮಾನಂದ ಎಸ್. ಹೆಗ್ಡೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
Kmc

ಈ ಸಂದರ್ಭದಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವಂತಹ ಹಿರಿಯ ವೈದ್ಯರುಗಳಾದ ಡಾ. ಎಂ. ಶಾಂತಾರಾಮ ಶೆಟ್ಟಿ, ಡಾ. ಬಿ. ಸೀತಾರಾಮ ರಾವ್, ಡಾ. ಉಮಾನಂದ ಮಲ್ಯ, ಡಾ. ಸುರೇಂದ್ರ ಯು. ಕಾಮತ್ ಮತ್ತು ಡಾ. ಕೆ. ರಾಮಚಂದ್ರ ಕಾಮತ್ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ವೇದಿಕೆಯಲ್ಲಿ ಗೌರವಿಸಲಾಯಿತು.
Kmc (3)

ಗೌರವ ಅತಿಥಿಗಳ ಸ್ಥಾನದಿಂದ ಮಾತನಾಡಿದ ಪ್ರೊ ಚಾನ್ಸೆಲ್ಲರ್ ಡಾ. ಎಂ. ಶಾಂತರಾಮ್ ಶೆಟ್ಟಿ ತಾನು ಕೆ.ಎಂ.ಸಿ ಮಂಗಳೂರಿನಲ್ಲಿ 1973 ರಿಂದ 1997 ರ ವರೆಗೆ ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗದಲ್ಲಿ ಕಳೆದ ಅನೇಕ ಅವಿಸ್ಮರಣೀಯ ಕ್ಷಣಗಳನ್ನು ಸ್ಮರಿಸಿಕೊಂಡರು. ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಕೀಲು ಮತ್ತು ಮೂಳೆ ಚಿಕಿತ್ಸಾ ವಿಭಾಗವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
Kmc (4)

ಕೆ.ಎಂ.ಸಿ. ಮಂಗಳೂರಿನ ಡೀನ್ ಡಾ. ಬಿ ಉನ್ನಿಕೃಷ್ಣನ್ ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಡಾ. ಶರತ್ ಕುಮಾರ್ ರಾವ್ ಕೆ ಮಾತನಾಡಿ ಕೆ.ಎಂ.ಸಿ. ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ತನ್ನ ಈ ಪ್ರಸ್ತುತ ಸಾಧನೆಗೆ ಕಾರಣೀಕರ್ತರಾದ ತನ್ನ ಗುರುಗಳ ಸಹಕಾರವನ್ನು ಸ್ಮರಿಸಿಕೊಂಡರು. ರೋಗಿಗಳ ಗುಣಮಟ್ಟದ ಆರೈಕೆಗಾಗಿ ಬದ್ಧತೆಗಾಗಿ ಹೊಂದಿರುವ ಕೆಎಂಸಿ ಆಸ್ಪತ್ರೆ ಅತ್ತಾವರದ ಎಲುಬು ಮತ್ತು ಕೀಲು ಚಿಕಿತ್ಸಾ ತಂಡದ ಶ್ರಮವನ್ನು ಶ್ಲಾಘಿಸಿದರು.
Kmc (2)

ವೇದಿಕೆಯಲ್ಲಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಬಿ. ಉನ್ನಿಕೃಷ್ಣನ್, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ | ಆನಂದ್ ವೇಣುಗೋಪಾಲ, ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ | ಜಾನ್ ರಾಮಪುರಂ, ಡಾ | ಆತ್ಮಾನಂದ ಎಸ್. ಹೆಗ್ಡೆ ಉಪಸ್ಥಿತರಿದ್ದರು. ಎಲುಬು ಮತ್ತು ಕೀಲು ಚಿಕಿತ್ಸಾ ವಿಭಾಗದ ಡಾ. ವಿಹಾರ್ ಜೋಶಿ  ಕಾರ್ಯಕ್ರಮವನ್ನು ನಿರೂಪಿಸಿ ಡಾ. ಪ್ರೇಮ್ಜೀತ್ ಸುಜೀರ್ ಧನ್ಯವಾದಗಳನ್ನು ಅರ್ಪಿಸಿದರು.

Ad
Ad
Nk Channel Final 21 09 2023
Ad