Bengaluru 23°C
Ad

ಮೀನು ತಿಂದ ನಂತರ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ?

ಕೆಲವು ಆಹಾರಗಳ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಒಂದಿಷ್ಟು ಸಂಯೋಜನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೀನು ಮತ್ತು ಹಾಲು ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೆಲವು ಆಹಾರಗಳ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಒಂದಿಷ್ಟು ಸಂಯೋಜನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೀನು ಮತ್ತು ಹಾಲು ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಎರಡು ಆಹಾರದ ಗುಣಗಳು ತದ್ವಿರುದ್ಧವಾಗಿದೆ. ಒಂದೇ ಸಮಯದಲ್ಲಿ ಮೀನು-ಹಾಲು ಸಂಯೋಜನೆ ಹಾನಿಕಾರ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.

ಹಾಲು ತಂಪಾಗಿಸುವ ಮತ್ತು ಮೀನು ಉಷ್ಣದ ಗುಣವನ್ನು ಹೊಂದಿದೆ. ತಂಪು!ಮತ್ತು ಉಷ್ಣದ ಆಹಾರ ಸಂಯೋಜನೆ ದೇಹದಲ್ಲಿ ಹಲವು ರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ದೇಹದ ಜೀರ್ಣಕ್ರಿಯೆಯ ಅಸಮತೋಲನಕ್ಕೆ ಕಾರಣವಾಗುತ್ತದೆ.

ಮೀನು ಮತ್ತು ಹಾಲು ಜೊತೆಯಾಗಿ ಸೇವನೆ ಮಾಡೋದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಮಾಡಿದರೆ ಹೊಟ್ಟೆಗೆ ಸಂಬಂಧಿತ ರೋಗಗಳು ಕಾಣಿಸಿಕೊಳ್ಳುತ್ತವೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿದವರಲ್ಲಿ ಈ ಸಮಸ್ಯೆ ಶೀಘ್ರವಾಗಿ ಕಾಣಿಸಿಕೊಳ್ಳಲ ಆರಂಭಿಸುತ್ತದೆ.

ಹಾಲು ಮತ್ತು ಮೀನು ಪ್ರತ್ಯೇಕವಾಗಿ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದು. ಕುಷ್ಠರೋಗ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯು ಮೆಲನಿನ್ ವಿರುದ್ಧ ಪ್ರತಿಕಾಯಗಳನ್ನು ಸಿದ್ಧ ಮಾಡುತ್ತದೆ.

ಈ ಪ್ರತಿಕಾಯಗಳು ಚರ್ಮಕ್ಕೆ ಬಣ್ಣ ನೀಡುವ ಜೀವಕೋಶಗಳನ್ನು ಹಾನಿ ಮಾಡುತ್ತವೆ. ಇದರಿಂದ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ.ಹಾಲು-ಮೀನು, ಮೊಟ್ಟೆ-ಮೊಸರು ಹೀಗೆ ತದ್ವಿರುದ್ಧ ಗುಣಗಳನ್ನು ಹೊಂದಿರುವ ಆಹಾರ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Ad
Ad
Nk Channel Final 21 09 2023
Ad