News Karnataka Kannada
Sunday, April 28 2024
ಸಾಂಡಲ್ ವುಡ್

ನಾನು ನಂದಿನಿ ಜೊತೆ ರೀಲ್ಸ್‌ ಮಾಡಿದ ಶಿವರಾಜ್‌ ಕುಮಾರ್‌

Shivarajkumar, who did reels with Nandini
Photo Credit : Twitter

ಬೆಂಗಳೂರು: ನನ್ನ ಹೆಸರು ಮುದ್ದುಕುಮಾರ ಅಂತ ಈ ಹಿಂದೆ ಆನ್‌ ಲೈನ್‌ ಗೇಮಿಂಗ್‌ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ರೀಲ್ಸ್‌ ನೊಂದಿಗೆ ವಿಕ್ಕಿ ಅಲಿಯಾಸ್‌ ವಿಕಾಸ್ ಬಂದಿದ್ದರು. ನಂತರ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ..’ ಮೂಲಕ ವಿಕ್ಕಿ ಸಾಕಷ್ಟು ಜನಪ್ರಿಯತೆ ಪಡೆದರು. ಎಲ್ಲಾ ಕಡೆಗಳಲ್ಲಿ ಈ ಹಾಡೇ ಕೇಳಿತು. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಬೇರೆ ಬೇರೆ ಸಾಹಿತ್ಯದೊಂದಿಗೆ ವೈರಲ್ ಮಾಡಲಾಯಿತು. ಈಗ ವಿಕ್ಕಿ ಅವರು ಶಿವರಾಜ್​ಕುಮಾರ್ ಜೊತೆ ಹೊಸ ವಿಡಿಯೋ ಮಾಡಿದ್ದಾರೆ. ಹಾಗಂತ ಇದು ‘ನಾನು ನಂದಿನಿ..’ ಹಾಡಲ್ಲ. ‘ಘೋಸ್ಟ್’ ಚಿತ್ರದ ಥೀಮ್​ನಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಫ್ಯಾನ್ಸ್ ಇದನ್ನು ಸಖತ್ ಇಷ್ಟಪಡುತ್ತಿದ್ದಾರೆ.

ಶಿವರಾಜ್​ಕುಮಾರ್ ಅವರು ‘ಘೋಸ್ಟ್’ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರ ಮಾಡಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರದಲ್ಲಿ ಶಿವಣ್ಣ ಭಾಗಿ ಆಗಿದ್ದಾರೆ.

 

View this post on Instagram

 

A post shared by Vicky Pedia (@vickypedia_007)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು