ಚೈನ್ನೈ: ನಟ ದಳಪತಿ ವಿಜಯ್ ಅಭಿನಯದ ‘ಲಿಯೋ’ ಸಿನಿಮಾ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಪ್ರದರ್ಶನಗಳಿಗೆ ಅನುಮತಿ ನೀಡುವಂತೆ ಸಿನಿಮಾ ತಂಡ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿತ್ತು. ಲಿಯೋ ಸಿನಿಮಾ ನಿರ್ಮಾಪಕರಾದ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮುಂಜಾನೆ ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಬಗ್ಗೆ ಚರ್ಚೆ ನಡೆಸಿದ ನಂತರ, ಮೊದಲ ವಾರದಲ್ಲಿ ಒಂದು ವಿಶೇಷ ಪ್ರದರ್ಶನವನ್ನು ನಡೆಸಲು ಸರ್ಕಾರವು ಚಿತ್ರಮಂದಿರಗಳಿಗೆ ಅನುಮತಿ ನೀಡಿದೆ. ಚಿತ್ರಮಂದಿರಗಳು ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಬಹುದು. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮನವಿ ಮೇರೆಗೆ ಮೊದಲ ವಾರ ವಿಶೇಷ ಬೆಳಗ್ಗೆ 4 ಮತ್ತು ಬೆಳಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ನಡೆಸಲು ತಮಿಳುನಾಡು ಸರ್ಕಾರ ಚಿತ್ರಮಂದಿರಗಳಿಗೆ ಅವಕಾಶ ನೀಡಲಾಗಿದೆ.