News Karnataka Kannada
Wednesday, April 24 2024
Cricket
ಸಾಂಡಲ್ ವುಡ್

‘ಮೊಗ್ಗಿನ ಮನಸು’ ಸಿನಿಮಾಗೆ ಈಗ 15 ವರ್ಷ ಸಂಭ್ರಮ

moggina manasu
Photo Credit : By Author

ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದ ಮೊಗ್ಗಿನ ಮನಸ್ಸು ಸಿನಿಮಾ ಬಿಡುಗಡೆಯಾಗಿ ಇಂದಿಗೆ 15 ವರ್ಷವಾಗಿದೆ. ‘ಮೊಗ್ಗಿನ ಮನಸು’ ಸಿನಿಮಾದ ಯಶಸ್ಸಿನಿಂದ ಶಶಾಂಕ್​ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು. ಯಶ್​, ರಾಧಿಕಾ ಪಂಡಿತ್​, ಶುಭಾ ಪೂಂಜಾ ಅವರು ಸ್ಟಾರ್​ ಪಟ್ಟ ಪಡೆದುಕೊಂಡರು. ಯಶ್​ ಅವರು ಇಂದು ‘ರಾಕಿಂಗ್​ ಸ್ಟಾರ್​’ ಆಗಿ ಮಿಂಚುತ್ತಿದ್ದಾರೆ.

ನಟಿ ರಾಧಿಕಾ ಪಂಡಿತ್​ ಕೂಡ ಚಿತ್ರದಲ್ಲಿ ಸಾಧನೆ ಮಾಡಿದ್ದಾರೆ. ಅದಕ್ಕೆಲ್ಲ ನಾಂದಿ ಹಾಡಿದ್ದು ‘ಮೊಗ್ಗಿನ ಮನಸು’ ಸಿನಿಮಾ. ಹದಿಹರೆಯದ ಹೃದಯಗಳನ್ನು ತನ್ನತ್ತ ಸೆಳೆದುಕೊಂಡಿದ್ದ ಆ ಸಿನಿಮಾ ಬಿಡುಗಡೆ ಆಗಿದ್ದು 2008ರ ಜುಲೈ 18ರಂದು. ನಿರ್ದೇಶಕ ಶಶಾಂಕ್​ ಅವರು ತೆರೆಗೆ ತಂದ ಸುಂದರ ಪ್ರೇಮಕಥೆಗೆ ಈಗ 15 ವರ್ಷ ತುಂಬಿದೆ. ‘ಮೊಗ್ಗಿನ ಮನಸು’ ಸಿನಿಮಾ ತೆರೆಕಂಡು ಒಂದೂವರೆ ದಶಕ ಕಳೆದಿದೆ. ಇಂದಿಗೂ ಕೂಡ ಪ್ರೇಕ್ಷಕರ ಫೇವರಿಟ್​ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರಕ್ಕೆ ಸ್ಥಾನವಿದೆ. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ಇದ್ದರೂ ಚಿತ್ರ ಭಾರೀ ಹಿಟ್ ಆಗಿತ್ತು. ಈ ಸಿನಿಮಾ, ಅದರ ಹಾಡುಗಳು ಇಂದಿಗೂ ಎಲ್ಲರಿಗೂ ಅಚ್ಚುಮೆಚ್ಚು. ಈ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರೊಂದಿಗೆ ಶುಭಾ ಪೂಂಜಾ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮೊಗ್ಗಿನ ಮನಸ್ಸು ಸಿನಿಮಾಗೆ ಐದು ವಿಭಾಗಗಳಲ್ಲಿ ಫಿಲಂ ಫೇರ್​ ಪ್ರಶಸ್ತಿ ಲಭಿಸಿತ್ತು. ಯಶ್​ ಅವರಿಗೆ ಅತ್ಯುತ್ತಮ ಪೋಷಕ ನಟ, ರಾಧಿಕಾ ಅವರಿಗೆ ಅತ್ಯುತ್ತಮ ಬನಟಿ, ಶುಭಾ ಪೂಂಜಾ ಅವರಿಗೆ ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು.

ಮೊಗ್ಗಿನ ಮನಸು’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಯಶ್​ ಮತ್ತು ರಾಧಿಕಾ ಪಂಡಿತ್​ ಅವರು ರಿಯಲ್​ ಲೈಫ್​ನಲ್ಲಿಯೂ ಒಂದಾದರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ‘ಮೊಗ್ಗಿನ ಮನಸು’ ಚಿತ್ರದಿಂದ ಸಿಕ್ಕ ಯಶಸ್ಸಿನಿಂದ ನಿರ್ದೇಶಕ ಶಶಾಂಕ್​ ಅವರು ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು