ಬೆಂಗಳೂರು: ಕರಾವಳಿ ಮೂಲದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸಿನಿಮಾ ರಂಗದಲ್ಲಿ ಶ್ರಮ ಪಟ್ಟು ಮೇಲೆ ಬಂದವರು. ಇಬ್ಬರೂ ಕೂಡ ಒಟ್ಟಾಗಿ ಕೆಲಸ ಮಾಡಿದವರು. ಇದೀಗ ಇಬ್ಬರಿಗೂ ಕೂಡ ಒಂದೇ ಸಮಯದಲ್ಲಿ ಪ್ರಶಸ್ತಿಯೊಂದು ದೊರೆತಿದ್ದು, ಕನ್ನಡಿಗರಿಗೆ ಹೆಮ್ಮೆ ಎನಿಸಿದೆ. ಇತ್ತೀಚೆಗೆ ನಡೆದ ‘ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ರಿಷಬ್ ಶೆಟ್ಟಿಗೆ ಐಕಾನಿಕ್ ಡೈರೆಕ್ಟರ್ ಹಾಗೂ ರಕ್ಷಿತ್ ಶೆಟ್ಟಿಗೆ ಟ್ರೆಂಡಿಂಗ್ ಆ್ಯಕ್ಟರ್ ಅವಾರ್ಡ್ ಸಿಕ್ಕಿದೆ.
ಇನ್ನೋವೇಟೀವ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಅವಾರ್ಡ್ ನೀಡಲಾಗಿದೆ. ‘ಇನ್ನೋವೇಟೀವ್ ಫಿಲಂ ಅಕಾಡೆಮಿ’ಯನ್ನು ಶರವಣ ಪ್ರಸಾದ್ ಸಂಸ್ಥಾಪಿಸಿದ್ದಾರೆ. ಮಾರತ್ಹಳ್ಳಿಯ ಇನ್ನೋವೇಟೀವ್ ಮಲ್ಟಿಪ್ಲೆಕ್ಸ್ನಲ್ಲಿ 6ನೇ ಇನ್ನೋವೇಟೀವ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸ’ದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆದಿದೆ. ಐ.ಎ.ಎಸ್. ಅಧಿಕಾರಿ ಅಪೂರ್ವ ಚಂದ್ರ ಮುಖ್ಯ ಅತಿಥಿಗಳಾಗಿ ಈ ಸಮಾರಂಭದಲ್ಲಿ ಭಾಗವಹಿಸಿದರು. ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ಅವಾರ್ಡ್ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ ಅವರು, ‘ಈ ಗೌರವ ಸಲ್ಲಿಕೆ ಆಗಬೇಕಾಗಿದ್ದು ಕನ್ನಡಿಗರಿಗೆ. ಸಿನಿಮಾ ಯಶಸ್ಸಿಗೆ ಅವರೇ ಕಾರಣ. ಅವರ ಪ್ರತಿಕ್ರಿಯೆಯಿಂದ ಸಿನಿಮಾ ಬೇರೆ ಭಾಷೆಗಳಿಗೂ ತಲುಪಿತು ಎಂದರು.