News Karnataka Kannada
Tuesday, May 07 2024
ಸಾಂಡಲ್ ವುಡ್

ಮೈಸೂರು: ತ್ರಿಬಲ್ ರೈಡಿಂಗ್ ಚಿತ್ರ ಯಶಸ್ವಿ ಪ್ರದರ್ಶನ

Mysuru: Triple Riding movie to be screened successfully
Photo Credit : By Author

ಮೈಸೂರು: ಕಳೆದ ವಾರ ಬಿಡುಗಡೆಯಾಗಿರುವ ನಟ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮೇಘಾ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಚಿತ್ರ ತಂಡವು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತ್ರಿಬಲ್ ರೈಡಿಂಗ್ ಸಾಂಸಾರಿಕ ಚಲನಚಿತ್ರವಾಗಿದ್ದು, ಇಡೀ ಕುಟುಂಬ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಸದಭಿರುಚಿಯ ಚಿತ್ರವಾಗಿದೆ. ಚಿತ್ರದಲ್ಲಿ ನಾನು ಉತ್ತಮ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರುವುದು ಸಂತಸವಾಗಿದೆ ಎಂದರು. ಜೊತೆ ಜೊತೆಯಲಿ ಧಾರಾವಾಹಿ ನನಗೆ ಉತ್ತಮ ಹೆಸರು ತಂದುಕೊಟ್ಟಿದೆ. ಆದರೆ, ಚಿತ್ರರಂಗ ಹೊಸದಾಗಿತ್ತು. ಚಿತ್ರತಂಡ ಸಹಾ ಉತ್ತಮ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅಭಿನಯಿಸುವುದು ಕಷ್ಟವಾಗಲಿಲ್ಲ ಎಂದರು. ನಿರ್ದೇಶಕ ಮಹೇಶ್, ನಟಿ ರಚನಾ ಇಂದರ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು