ಬೆಂಗಳೂರು: ಇಂದು ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿ ಬರ್ತ್ಡೇ ಚಿರು, ಮಿಸ್ ಯು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮೇಘನಾ ರಾಜ್ ಅವರು ಚಿರು ನೆನಪಿನಲ್ಲಿ “ಹ್ಯಾಪಿ ಬರ್ತ್ಡೇ ಹಸ್ಬಂಡ್, ವಿ ಲವ್ ಯು” ಎಂದು ಭಾವುಕವಾಗಿ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ರಾಜ್ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ 2 ಮೇ 2018 ರಂದು ವಿವಾಹಾಗಿದ್ದು, ಮದುವೆಯಾದ ಎರಡೇ ವರ್ಷದಲ್ಲಿ 7 ಜೂನ್ 2020 ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು.
ಪತಿ ಚಿರಂಜೀವಿ ಸರ್ಜಾ ಅಗಲಿಕೆ ನೋವನ್ನು ಮೇಘನಾ ರಾಜ್ ತಮ್ಮ ಮಗ ರಾಯನ್ ನಗುವಿನಲ್ಲಿ ಮರೆಯುತ್ತಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಹುಟ್ಟುಹಬ್ಬವೂ ಇತ್ತು. ಇದೀಗ ಚಿರು ಮಗುವಿನ ಹುಟ್ಟುಹಬ್ಬವೂ ಅಕ್ಟೋಬರ್ 22ರಲ್ಲಿ ನಡೆಯಲಿದೆ.