News Karnataka Kannada
Monday, May 20 2024
ಸಾಂಡಲ್ ವುಡ್

ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ 2 ಪ್ರಮುಖ ಪ್ರಶಸ್ತಿ ಗರಿ

koli-esru-movie
Photo Credit : Facebook

ಸ್ಯಾಂಡಲ್​ವುಡ್​ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ.  ಕಥಾವಸ್ತುವಿನ ಕಾರಣದಿಂದ ಕನ್ನಡದ ಚಿತ್ರಗಳು ಗಮನ ಸೆಳೆಯುತ್ತಿವೆ. ಅದಕ್ಕೆ  ಇತ್ತೀಚಿನ ಉದಾಹರಣೆ ಎಂದರೆ ‘ಕೋಳಿ ಎಸ್ರು’ ಸಿನಿಮಾ. ಈ ಚಿತ್ರಕ್ಕೆ ಕೆನಡಾದ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಎರಡು ಪ್ರಮುಖ ಪ್ರಶಸ್ತಿಗಳು ಸಿಕ್ಕಿವೆ. ನಿರ್ದೇಶಕಿ ಚಂಪಾ ಶೆಟ್ಟಿ ಅವರು ‘ಅತ್ಯುತ್ತಮ ನಿರ್ದೇಶನ’ ಹಾಗೂ ಅಕ್ಷತಾ ಪಾಂಡವಪುರ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಚಿತ್ರತಂಡದವರು ಸೋಶಿಯಲ್​ ಮೀಡಿಯಾ ಮೂಲಕ ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಪೃಥ್ವಿ ಕೊಣನೂರು ಅವರ ‘ಹದಿನೇಳೆಂಟು’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಸಿಕ್ಕಿದೆ.

‘ಓಹ್​ ಮೈ ಗಾಡ್​… ನಿಜವಾಗಿಯೂ? ಕೋಳಿ ಎಸ್ರು ಚಿತ್ರದ ಅಭಿನಯಕ್ಕಾಗಿ ಮತ್ತೊಂದು ಪ್ರಶಸ್ತಿ. ನನ್ನ ಗುರು ಆದಿಲ್​ ಹುಸೇನ್​ ಅವರ ಜೊತೆ ಈ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಚಂಪಾ ಶೆಟ್ಟಿ ಅವರಿಗೆ ಅಭಿನಂದನೆಗಳು. ‘ಹದಿನೇಳೆಂಟು’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಪೃಥ್ವಿ ಕೊಣನೂರು ಅವರಿಗೂ ಅಭಿನಂದನೆ. ಇದು ನನ್ನ ಎರಡನೇ ಪ್ರಶಸ್ತಿ’ ಎಂದು ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

https://www.facebook.com/IA3AkshathaPandavapura/posts/569870818670006?ref=embed_post

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು