ಬೆಂಗಳೂರು: ನಟ ಡಾಲಿ ಧನಂಜಯ್ಗೆ ಇಂದು (ಆ.23) ಬರ್ತ್ಡೇ ಸಂಭ್ರಮ. ಮಧ್ಯರಾತ್ರಿಯಿಂದಲೇ ಅವರ ಬರ್ತ್ಡೇ ಆಚರಣೆ ಆರಂಭ ಆಗಿದೆ. ಅಭಿಮಾನಿಗಳು ಅದ್ದೂರಿಯಾಗಿ ಡಾಲಿಯ ಜನ್ಮದಿನ ಆಚರಿಸುತ್ತಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಹಾಗೂ ಕುಟುಂಬದವರು ಡಾಲಿಗೆ ಬರ್ತ್ಡೇ ವಿಶ್ ತಿಳಿಸುತ್ತಿದ್ದಾರೆ.
ಬರ್ತ್ಡೇಗೆ ಹಲವು ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ. ಡಾಲಿಯ ವಿಡಿಯೋ ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶನಗೊಂಡಿದೆ. ಜೊತೆಗೆ ಅವರ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ‘ಉತ್ತರಕಾಂಡ’ ಚಿತ್ರದಲ್ಲಿ ಡಾಲಿ ಲುಕ್ ಬಿಡುಗಡೆ ಮಾಡಲಾಗಿದೆ. ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರವನ್ನು ಸತ್ಯ ರಾಯಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ‘ಬಡವ ರಾಸ್ಕಲ್’ ಟೀಂ ಈ ಚಿತ್ರಕ್ಕಾಗಿ ಒಂದಾಗಿದೆ ಅನ್ನೋದು ವಿಶೇಷ.