ನವಲಗುಂದ: ಪಟ್ಟಣದ ಶ್ರೀ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರಾ ಚಿತ್ರಕ್ಕೆ ಅಭಿಮಾನಿಗಳು ಶತದಿನೋತ್ಸವ ಆಚರಿಸಲಿ ಶುಭಕೋರಿದರು.
ನಗರದ ಡಿ ಬಾಸ್ ಫ್ಯಾನ್ಸ್ ಅಸೋಸಿಯೆಷನ್ಸ್ ವತಿಯಿಂದ ಚಿತ್ರಮಂದಿರಕ್ಕೆ ಹಾಕಲಾದ ಸಿನಿಮಾ ಪೋಸ್ಟರ್ ಗೆ ಹೂವಿನ ಮಾಲೆ ಹಾಕಿ ದರ್ಶನ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇನ್ನೂ ಚಿತ್ರ ವೀಕ್ಷಣೆಗೆ ಬಂದವರಿಗೆ ಸಿಹಿ ವಿತರಣೆ ಮಾಡುವ ಮೂಲಕ ತಮ್ಮ ಅಭಿಮಾನ ಮೆರೆದರು.