ಮಣಿಪುರ: ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್ಬಾಮ್ ಅವರನ್ನು ಅಪಹರಿಸಲಾಗಿದೆ. ಅಖು ಅವರ ಪತ್ನಿ ಹಾಗೂ ತಾಯಿಯ ಹಣೆಗೆ ಬಂದೂಕಿಟ್ಟು ಸಶಸ್ತ್ರಧಾರಿಗಳು ಅಖು ಅವರನ್ನು ಅಪಹರಿಸಿದ್ದಾರೆ.
ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ಮೂಲದವರು. ಅವರು ಗಾಯಕರಾಗಿದ್ದು ಗೀತರಚನೆಕಾರ ಮತ್ತು ಇಂಫಾಲ್ ಟಾಕೀಸ್ ಎಂಬ ಜಾನಪದ ರಾಕ್ ಬ್ಯಾಂಡ್ನ ಸಂಸ್ಥಾಪಕರಾಗಿದ್ದಾರೆ.