News Karnataka Kannada
Sunday, May 05 2024
ಸಾಂಡಲ್ ವುಡ್

ಬೆಳ್ತಂಗಡಿ: ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದ ನಟ ರಿಷಬ್ ಶೆಟ್ಟಿ

Actor Rishab Shetty visits Dharmasthala to have darshan of God
Photo Credit : By Author

ಬೆಳ್ತಂಗಡಿ: ವಿಶ್ವಪ್ರಸಿದ್ಧ ಕಾಂತಾರ ಚಲನಚಿತ್ರದ ನಟ ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಬುಧವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.

ಬಳಿಕ ಹೆಗ್ಗಡೆಯವರ ಬೀಡಿನಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಡಿ.ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಇತ್ತೀಚೆಗೆ ಮಂಗಳೂರಿನಲ್ಲಿ “ಕಾಂತಾರ” ಚಲನಚಿತ್ರ ನೋಡಿದ್ದು ಸಿನಿಮಾದ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಹೆಗ್ಗಡೆಯವರು ರಿಷಬ್ ಶೆಟ್ಟಿ ದಂಪತಿಯನ್ನು ಗೌರವಿಸಿ ಅಭಿನಂದಿಸಿದರು. ನಟ ಪ್ರಮೋದ್ ಶೆಟ್ಟಿ ಕೂಡಾ ಉಪಸ್ಥಿತರಿದ್ದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿನಿಮಾ ತಯಾರಿ ಮೊದಲೆ ಧರ್ಮಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿ, ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದೆ. ಕಾಂತಾರದ ದೈವಾರಾಧನೆಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದೆ. ಹೆಗ್ಗಡೆಯವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ನಮಗೆ ದೇವರೇ ಸಿನಿಮಾ ನೋಡಿ ಆಶೀರ್ವದಿಸಿದಂತಾಗಿದೆ ಎಂದು ಹೇಳಿದ ರಿಷಬ್ ಶೆಟ್ಟಿ ಎಲ್ಲಾ ಕಡೆಗಳಲ್ಲಿ ಎರಡು ತಿಂಗಳಿಗೂ ಮಿಕ್ಕಿ ಜನರು ಚಲನಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಹಿಂದಿ, ತುಳು ಹಾಗೂ ಇತರ ಭಾಷೆಗಳಲ್ಲಿಯೂ ಸದ್ಯದಲ್ಲಿಯೇ ಕಾಂತಾರ ಪ್ರದರ್ಶನವಾಗಲಿದೆ ಎಂದು ಅವರು ಹೇಳಿದರು. ಪತ್ನಿ ಪ್ರಗತಿ ಶೆಟ್ಟಿ ಮಾತನಾಡಿ ಇನ್ನು ಎರಡು ತಿಂಗಳು ತೀರ್ಥಯಾತ್ರೆ ಮಾಡುವ ಕಾರ್ಯಕ್ರಮವಿದ್ದು ಬಳಿಕ ಕೊಂಚ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು