ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಯುಗಾದಿಯಂದು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದಾರೆ.
ಯುಗಾದಿ ಹಬ್ಬದಂದು ಮಗಳ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅದಿತಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದಿತಿ ಸಂತಸದ ಸುದ್ದಿ ಹೇಳುತ್ತಿದ್ದಂತೆ ಪತಿ ಯಶಸ್ ಕೂಡ ರಿಪ್ಲೈ ಮಾಡಿದ್ದಾರೆ. ನನ್ನ ಜೀವದ ಗೆಳತಿ ಅದಿತಿ, ನಿನ್ನ ಹಾಗೆಯೇ ನಮ್ಮ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಇದೀಗ ನಟಿಗೆ ಅಭಿಮಾನಿಗಳು, ಸಿನಿಮಾ ತಾರೆಯರು ಶುಭಕೋರುತ್ತಿದ್ದಾರೆ. ಇತ್ತೀಚೆಗೆ ಸೀಮಂತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿತ್ತು. ಜನವರಿಯಲ್ಲಿ ನಟಿ ಅದಿತಿ ಅವರು ಅಮ್ಮನಾಗುತ್ತಿರುವ ಸುದ್ದಿ ತಿಳಿಸಿದ್ದರು. ವಿಶೇಷ ಫೋಟೋಶೂಟ್ ಮಾಡಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು.