News Karnataka Kannada
Wednesday, May 08 2024
ಸಾಂಡಲ್ ವುಡ್

“ಸ್ಟೆಬಿಲಿಟಿ”ಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ ಲಕ್ಷ್ಮೀ ಆಂಬುಗ!

Stability
Photo Credit : News Kannada

ಸ್ಯಾಂಡಲ್ ವುಡ್: ಪ್ರತಿಭೆ ಮತ್ತು ಆಸಕ್ತಿ ಇವೆರಡು ಇದ್ದರೆ, ಬೆಳ್ಳಿ ತೆರೆಯ ಮೇಲೆ ಕಾಣೋದಕ್ಕೆ ಯಾವ ಹಿನ್ನೆಲೆಯ ಆವಶ್ಯಕತೆಯೂ ಇದುವುದಿಲ್ಲ. ಹೌದು, ಲಕ್ಷ್ಮೀ ಆಂಬುಗ ಅವರು ಒಬ್ಬ Working Professional ಆಗಿ ತಮ್ಮ ಹವ್ಯಾಸವನ್ನು ವಾರಾಂತ್ಯಗಳಲ್ಲಿ ಶ್ರದ್ಧೆಯಿಂದ ನಿಭಾಯಿಸಿ, ಒಂದು ಕನ್ನಡ science-fiction crime thriller ಚಲನಚಿತ್ರ “ಸ್ಟೆಬಿಲಿಟಿ”ಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಫೆಬ್ರವರಿ 25ರಂದು ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಮೂಲತಹ ಹಾಸನದವರಾಗಿದ್ದು ಇವರು modelling ನಟನೆ ಇವುಗಳಲ್ಲಿ ಆಸಕ್ತಿ ಹೊಂದಿದ್ದಾರೆ. 2019ನಲ್ಲಿ ಇವರು Corporate Beauty Pageant ಸೌಂದರ್ಯ ಸ್ಪರ್ಧೆಯಲ್ಲಿ Miss Corporate India Diva ಸ್ಥಾನವನ್ನು ಗಳೆಸಿದ್ದಾರೆ.

“ಸ್ಟೆಬಿಲಿಟಿ” ಇವರ ಮೊಟ್ಟ ಮೊದಲನೆಯ ಚಿತ್ರವಾಗಿದ್ದು, R&AW officer ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ಕೂಡ ಇವರ ನಟನೆಗೆ ಲಭಿಸಿದೆ. ಇವರು ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಒಂದು ಉತ್ತಮ ಪ್ರತಿಭೆ.

“ಸ್ಟೆಬಿಲಿಟಿ” ಚಿತ್ರೀಕರಣದ ಸಮಯದಲ್ಲಿ ತುಂಬ ಅನುಭವ ಪಡೆದುಕೊಂಡಿದ್ದಾರೆ. ಎಲ್ಲ ಸ್ವಂತವಾಗಿ ಮಾಡಿದ್ದರಿಂದ ಕೇವಲ ನಟನೆ ಅಲ್ಲದೆ ನಿರ್ಮಾಣದ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಅವರ ತಂಡದಲ್ಲಿ ಪ್ರತಿಯೊಬ್ಬರೂ ತುಂಬಾ ಸೃಜನಶೀಲರು, ನಿರ್ದೇಶಕ ಗೌತಮ್ ಕಾನಡೆ ಹಾಗು ಸಹಕಲಾವಿದರಾದ ಕಶ್ಯಪ್ ಭಾಸ್ಕರ್, ಸಂದೀಪ್, ಶ್ರೀನಿಧಿ ಹಾಗು ದಿವ್ಯಾ ಬಾಳ್ವೆ ಅವರ ಜೊತೆ ಕೆಲಸ ಮಾಡಿದ್ದು ತುಂಬಾ ಮೋಜಿನ ವಿಷಯವಾಗಿತ್ತು.

ಇಂತಹ ಯುವ ಪ್ರತಿಭೆಗೆ ಇನ್ನು ಹೆಚ್ಚು ಅವಕಾಶಗಳು ಒದಗಿಬರಲಿ ಎಂಬುದು ನಮ್ಮ ಹಾರೈಕೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು