ಉಕ್ರೇನ್ ನ ಲ್ವಿವ್ ಬಳಿಯ ಮಿಲಿಟರಿ ನೆಲೆಯ ಮೇಲೆ ರಷ್ಯಾ ಸೇನೆ ಏರ್ ಸ್ಟ್ರೈಕ್ ನಡೆಸಿದ್ದು, ಈ ಘಟನೆಯಲ್ಲಿ ಕನಿಷ್ಠ 35 ಜನರು ಸಾವನ್ನಪ್ಪಿದ್ದು, 134ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದುಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇನ್ನು ದಾಳಿಯನ್ನು ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ ಕೂಡ ಟ್ವಿಟರ್ ನಲ್ಲಿ ದೃಢಪಡಿಸಿದ್ದು, ರಷ್ಯಾ ಲ್ವಿವ್ ಬಳಿಯ ಶಾಂತಿಪಾಲನಾ ಮತ್ತು ಭದ್ರತೆಯ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆಯಿಂದ ಉಕ್ರೇನ್ ನ ಪಶ್ಚಿಮಕ್ಕೆ ದಾಳಿಯನ್ನು ಮುಂದುವರೆಸಲಾಗಿದೆ. ಇದು ಲ್ವಿವ್ ನಗರ ಮತ್ತು ಪೋಲೆಂಡ್ ನೊಂದಿಗೆ ಉಕ್ರೇನ್ ನ ಗಡಿಗೆ ಹತ್ತಿರದಲ್ಲಿದೆ.
russia has attacked the International Center for Peacekeeping&Security near Lviv.Foreign instructors work here.Information about the victims is being clarified.This is new terrorist attack on peace&security near the EU-NATO border.Action must be taken to stop this.Close the sky!
— Oleksii Reznikov (@oleksiireznikov) March 13, 2022