ನಟ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರದ ಬಿಡುಗಡೆ ದಿನದಂದೇ ನಟ ಪುನೀತ್ ಅಗಲಿಕೆಯ ಬಿರುಗಾಳಿ ಚಿತ್ರರಂಗವನ್ನು ಆವರಿಸಿತ್ತು. ಇದೀಗ ಚಿತ್ರರಂಗ ಆ ನೋವಿನಿಂದ ಕೊಂಚ ಚೇತರಿಸಿಕೊಂಡಿದ್ದು, ಇಂದಿನಿಂದ ಹೊಸ ಚಿತ್ರಗಳು ತೆರೆ ಮೇಲೆ ಬರಲಾರಂಭಿಸಿವೆ.
ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ
Hattrick Hero ಶಿವಣ್ಣ 🌟
to watch #Bhajarangi2 with fans, This Sunday.📍 Anupama Theatre, Gandhinagar.#Bhajarangi2 @NimmaShivanna @NimmaAHarsha @ArjunJanyaMusic #BhavanaMenon @dskcuts #JayannaBhogendra pic.twitter.com/hTJMFwnU3q
— Jayanna Films (@JayannaFilms) November 12, 2021
ಇದೇ ಬಾನುವಾರ ನ.14ರಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಿದ್ದಾರೆ. ಭಜರಂಗಿ ಚಿತ್ರತಂಡದ ಈ ಹೊಸ ಅಪ್ಡೇಟ್ ಸಿನಿ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಹೆಚ್ಚಿಸಿದೆ.
ಈ ಬಗ್ಗೆ ಸಿನಿಮಾವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲಂ ಮಾಹಿತಿ ನೀಡಿದ್ದು, ಅಭಿಮಾನಿಗಳಿಗೆ ಭಜರಂಗಿ ಕೊಡುಗೆ. ಇದೇ ಭಾನುವಾರ ಅಭಿಮಾನಿಗಳೊಂದಿಗೆ ಸಿನಿಮಾ ನೋಡಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ ಎಂದು ತಿಳಿಸಿದೆ.