News Karnataka Kannada
Monday, May 06 2024
ಸಾಂಡಲ್ ವುಡ್

ಕಾಲಿವುಡ್’ಗೆ ಕಾಲಿಡಲು ಸಜ್ಜಾದ ಕರಾವಳಿಯ ಪ್ರತಿಭೆ ಪೃಥ್ವಿ ಅಂಬರ್!

Prathwi Amber 10082021
Photo Credit :

ದಿಯಾ ಚಿತ್ರದ ಮೂಲಕ ಗಡಿದಾಟಿ ಜನಪ್ರಿಯತೆ ಗಳಿಸಿರುವ ಕರಾವಳಿಯ ಪ್ರತಿಭೆ ಪೃಥ್ವಿ ಅಂಬರ್ ಇದೀಗ ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ.ಈ ಚಿತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.

ವಿಜಯ್ ಮಿಲ್ಟನ್ ನಿರ್ದೇಶನದ ‘ಮಳೈ ಪಿಡಿಕ್ಕಾದ ಮಣಿದನ್’ ಚಿತ್ರದ ಮೂಲಕ ಪೃಥ್ವಿ ಅಂಬರ್ ತಮಿಳು ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ವಿಜಯ್ ಮಿಲ್ಟನ್ ಸದ್ಯ ಶಿವರಾಜ್ ಕುಮಾರ್, ಪೃಥ್ವಿ ಅಂಬರ್,ಧನಂಜಯ್ ನಟಿಸುತ್ತಿರುವ ‘ಬೈರಾಗಿ’ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

‘ಮಳೈ ಪಿಡಿಕ್ಕಾದ ಮಣಿದನ್’ ಚಿತ್ರದಲ್ಲಿ ವಿಜಯ್ ಆ್ಯಂಟನಿ ನಾಯಕನಾಗಿದ್ದು, ಪೃಥ್ವಿ ಅಂಬರ್ ಹಾಗೂ ಧನಂಜಯ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.ಈ ಚಿತ್ರದ ಶೂಟಿಂಗ್ ಆಗಸ್ಟ್ ಹನ್ನೆರಡರಿಂದ ಶುರುವಾಗಲಿದೆ.

ದಿಯಾ ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್’ಗೆ ಕಾಲಿಟ್ಟಿರೋ ಪೃಥ್ವಿ ಅಂಬರ್ ಕನ್ನಡದ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇವರು ನಟಿಸಿರುವ ‘ಲೈಫ್ ಇಸ್ ಬ್ಯೂಟಿಫುಲ್’, ‘ForRegn’, ‘ಬೈರಾಗಿ’ ‘ಶುಗರ್ ಲೆಸ್’ ಚಿತ್ರಗಳು ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು