News Karnataka Kannada
Saturday, May 04 2024
ಸಾಂಡಲ್ ವುಡ್

ನಟ ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ 2ನೇ ಭಾಗದಲ್ಲಿ ಗ್ಲಾಮರಸ್ ನಟಿ ಮೇಘನಾ ಗಾಂವ್ಕರ್

Ramesh Aravind
Photo Credit :

ನಟ ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ 2ನೇ ಭಾಗದಲ್ಲಿ ಗ್ಲಾಮರಸ್ ನಟಿ ಮೇಘನಾ ಗಾಂವ್ಕರ್ ಎಂಟ್ರಿ ಕೊಡಲಿದ್ದಾರಂತೆ.

ಶಿವಾಜಿ ಸೂರತ್ಕಲ್ -2 ಚಿತ್ರದಲ್ಲಿ ಮೇಘನಾ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಡಿಸಿಪಿ ದೀಪಾ ಕಾಮತ್ ಎಂಬ ಪಾತ್ರವನ್ನು ಮೇಘನಾ ನಿಭಾಯಿಸಲಿದ್ದಾರೆ. ಈ ಪಾತ್ರ ಕಥಾನಾಯಕ ಶಿವಾಜಿ ಸೂರತ್ಕಲ್ ಗೆ ಬೆನ್ನೆಲುಬಾಗಿ ಇರಲಿದೆ.

ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಜೊತೆಗೆ ರಾಧಿಕಾ ನಾರಾಯಣ್, ರಾಘು ರಾಮನಕೊಪ್ಪ, ವಿದ್ಯಾ ಮೂರ್ತಿ ಪ್ರಮುಖ ಪ್ರಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನಷ್ಟು ಮಹಾನ್ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದು, ಮುಂದಿನ ದಿನಗಳಲ್ಲಿ ಅವರ ಹೆಸರುಗಳು ಹೊರಬೀಳಲಿದೆ.

ಈ ಚಿತ್ರಕ್ಕೆ ಆಕಾಶ್ ಶ್ರೀವತ್ಸ ಕಥೆ-ಚಿತ್ರಕಥೆ- ನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರದ ನಿರ್ಮಾಣದ ಹೊಣೆಯನ್ನು ರೇಖಾ ಕೆ.ಎಸ್. ಮತ್ತು ಅನುಪ್ ಗೌಡ ಹೊತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು