ನಟ ದುನಿಯಾ ವಿಜಯ್ ಸಿನಿಮಾ ‘ಸಲಗ’ಕ್ಕೆ ಅಭಿಮಾನಿಗಳು ಭರ್ಜರಿ ಸ್ವಾಗತಕೊಟ್ಟಿದ್ದಾರೆ. ಸಲಗ ಚಿತ್ರದ ಮೊದಲದಿನದ ಫಸ್ಟ್ ಶೋ ಹೌಸ್ ಫುಲ್ ಪ್ರದರ್ಶನ ನೀಡುತ್ತಿದೆ. ರಾಜ್ಯದೆಲ್ಲೆಡೆ ಫಸ್ಟ್ ಶೋಗೆ ಚಿತ್ರಮಂದಿರಗಳ ಎದುರು ಅಭಿಮಾನಿಗಳು ವಿಜಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
ಚಿತ್ರ ಅದ್ಧೂರಿ ಪ್ರದರ್ಶನ ನೀಡುತ್ತಿದ್ದು, 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಲಗ ಪ್ರದರ್ಶನ ಆರಂಭಿಸಿದೆ. ಚಿತ್ರದಲ್ಲಿನ ಅದ್ಭುತ ಮೇಕಿಂಗ್, ಹಾಗೂ ದುನಿಯಾ ವಿಜಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಸಲಗ.ಇಂದೇ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
ಆದರೆ ರಾಜ್ಯದ ಹಲವೆಡೆ ಏರ್ಪಡಿಸಿದ್ದ ಫ್ಯಾನ್ಸ್ ಶೋಗಳು ರದ್ದಾಗಿವೆ. ನಿನ್ನೆ ಬೆಳಗ್ಗೆ ಚಿತ್ರಮಂದಿರಕ್ಕೆ ಬಂದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದ್ದು, ಚಿತ್ರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.