ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೋಹ್ಲಿ ಮಗಳು ವಮಿಕಾಳ ಫೋಟೊವನ್ನು ಇದುವರೆಗೂ ಅಭಿಮಾನಿಗಳಿಗೆ ತೋರಿಸಿಯೇ ಇಲ್ಲ. ಆದರೆ ಮಗಳ ಬ್ಯಾಕ್ಪೋಸ್ ಫೋಟೊಗಳನ್ನು ಹಾಕಿ ಅಭಿಮಾನಿಗಳಲ್ಲಿ ಕುತೂಹಲ ಮೂಡುವಂತೆ ಮಾಡುತ್ತಾರೆ.
ಇದೇ ಸಾಲಿಗೆ ಈಗ ಮತ್ತೊಂದು ಫೋಟೊ ಸೇರ್ಪಡೆಯಾಗಿದೆ. ಮಗಳನ್ನು ಮುದ್ದು ಮಾಡುತ್ತಿರುವ ಫೋಟೊ ಒಂದನ್ನು ಅನುಷ್ಕಾ ಶೇರ್ ಮಾಡಿದ್ದು, ಮಗಳಿಗೆ ಅಷ್ಟಮಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ನೀನು ಪ್ರತಿದಿನವೂ ನನ್ನನ್ನು ಇನ್ನಷ್ಟು ಧೈರ್ಯವಂತೆಯಾಗಿ ಮಾಡುತ್ತಿದ್ದೀಯಾ. ನಿನಗೂ ದೇವರು ಎಲ್ಲ ರೀತಿಯ ಶಕ್ತಿಯನ್ನು ನೀಡಲಿ ವಮಿಕಾ ಎಂದಿದ್ದಾರೆ. ಈ ಫೋಟೊ ಈಗಾಗಲೇ ವೈರಲ್ ಆಗಿದ್ದು, ಎಲ್ಲರೂ ವಮಿಕಾಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.