ಕೊರೋನಾ ಮೂರನೇ ಅಲೆ ಏಳುತ್ತಿರುವ ಕಾರಣ ಕರ್ನಾಟಕದಲ್ಲಿ ಮತ್ತು ವೀಕೆಂಡ್ ಲಾಕ್ಡೌನ್ ಜಾರಿಗೊಳ್ಳಿಸಿದ್ದಾರೆ. ಬಾಲಿವುಡ್ನಲ್ಲಿ ಬಹುತೇಕ ಸ್ಟಾರ್ ನಟ, ನಟಿಯರಿಗೆ ಕೊರೋನಾ ಬಂದಿತ್ತು. ಈಗ ಸ್ಯಾಂಡಲ್ವುಡ್ನಲ್ಲಿ ಒಬ್ಬೊಬ್ಬರಿಗೇ ಈ ವೈರಸ್ ಒಕ್ಕರಿಸುತ್ತಿದೆ. ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸೋಂಕಿನ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸುಮಾರು 6 ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿತಾ ಚಂದ್ರಶೇಖರ್ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರಿಗೆ ಕೊರೋನಾ ಸೋಂಕು ತಗುಲಿದೆ. ‘ನನಗೆ ಕೊರೋನಾ ಪಾಸಿಟಿವ್, ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡಿವೆ. ವ್ಯಾಕ್ಸಿನ್ ತೆಗೆದುಕೊಂಡಿರುವುದಕ್ಕೆ ಸಹಾಯವಾಯಿತು, ವ್ಯಾಕ್ಸಿನ್ಗೆ ಧನ್ಯವಾದಗಳು. ನಾನು ಮೂರು ದಿನಗಳಿಂದ ಐಸೋಲೇಟ್ ಆಗಿದ್ದೀನಿ. ಕೊರೋನಾ ಟೆಸ್ಟ್ ರಿಸಲ್ಟ್ ಬಂದು ಮೂರು ದಿನಗಳಾಗಿತ್ತು. ದೇವರ ದಯೆ ನಾನು ಹೆಚ್ಚಿನ ಜನರನ್ನು ಭೇಟಿ ಮಾಡಿಲ್ಲ, ನನ್ನಿಂದ ಬೇರೆ ಅವರಿಗೆ ತಗಲುವ ಹಾಗೆ ನಾನು ಮಾಡಿಲ್ಲ. ದಯವಿಟ್ಟು ಮಾಸ್ಕ್ ಧರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಎಲ್ಲಾ ರೀತಿಯ ಕೋವಿಡ್ ರೂಲ್ಸ್ ಫಾಲೋ ಮಾಡಿ, ಮುನ್ನೆಚ್ಚರಿಕೆ ವಹಿಸಿ,’ ಎಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.
ಮನೆಯಲ್ಲಿಯೇ ಐಸೋಲೇಟ್ ಆಗಿರುವ ಹಿತಾ ಸೋಷಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿದ್ದಾರೆ. ತಾವು ಏನೆಲ್ಲಾ ಮಾಡಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೇ ದಿನ ಸಾಗಿಸಲು ಏನು ಮಾಡಲಿದ್ದಾರೆ ಎಂಬುದನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ ಜನಪ್ರಿಯ ಐಕಾನ್ಗಳಾದ ಕೆರ್ಡಾಶಿಯನ್ ಮತ್ತು ಜೆನ್ನರ್ಸ್ ಅವರ ವಿಡಿಯೋ ಮತ್ತು ಸಿನಿಮಾಗಳನ್ನು ನೋಡುತ್ತಿದ್ದಾರಂತೆ. ಹೀಗಾಗಿ ನಿಮ್ಮಿಂದ ನನ್ನ ಐಸೋಲೇಷನ್ ಬೆಟರ್ ಆಗಿದೆ ಎಂದಿದ್ದಾರೆ ಹಿತಾ.