News Karnataka Kannada
Sunday, May 05 2024
ಸಾಂಡಲ್ ವುಡ್

ತೆರೆ ಮೇಲೆ ನಾಳೆ ‘ಮೈಸೂರು’ ಚಿತ್ರ ಅನಾವರಣ

Mysore Cinema
Photo Credit : News Kannada

ಸ್ಯಾಂಡಲ್‌ವುಡ್‌: ಮೈಸೂರು.. ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಜ್ಜಾಗಿ ನಿಂತಿರುವ ಸಿನಿಮಾ. ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ ಟೈಟಲ್ ಹಾಗೂ ಬಿಡುಗಡೆಯಾಗಿರುವ ಸಿನಿಮಾದ ಝಲಕ್ ಗಳ ಮೂಲಕ ಎಲ್ಲರಗಮನ ಸೆಳೆಯುತ್ತಿದೆ. ವಾಸುದೇವ ರೆಡ್ಡಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ನಾಳೆ ಚಿತ್ರಮಂದಿರದ ಅಂಗಳಕ್ಕೆ ಕಾಲಿಡಲಿದೆ.

ಮೈಸೂರು ಸಿನಿಮಾ ಅಪ್ಪಟ ಪ್ರೀತಿ ಕಥೆ ಹೊತ್ತ ಸಿನಿಮಾ. ಅನಿವಾಸಿ ಕನ್ನಡಿಗನೊಬ್ಬನ ಪ್ರೇಮ್ ಕಹಾನಿ ಸುತ್ತ ಈ ಸಿನಿಮಾ ಹೆಣೆಯಲಾಗಿದೆ. ಕೇವಲ ಪ್ರೀತಿ ಅಂತ ಗಿರಕಿ ಹೊಡೆಯದೇ ಒಂದೊಳ್ಳೆ ಸಾಮಾಜಿಕ ಸಂದೇಶ, ಅದರೊಂದಿಗೆ ಒಂದಿಷ್ಟು ಹೊಸತನದ ಫ್ಲೇವರ್, ರೋಚಕಗೊಳಿಸೋ ಕ್ಲೈಮ್ಯಾಕ್ಸ್ ಕೂಡ
ಇದೆ. ಚಿತ್ರದ ಟ್ರೇಲರ್ ಹಾಗೂ ಸಾಂಗ್ಸ್ ಭರಸವೆ ಹುಟ್ಟು ಹಾಕಿದ್ದು, ಪ್ರೇಕ್ಷಕರಲ್ಲೂ ಕುತೂಹಲ ಮೂಡಿಸಿದೆ.

ಒಡಿಶಾ ಮೂಲದ ಸಂಹಿತ್ ಚಿತ್ರದ ನಾಯಕ ನಟ, ಮೈಸೂರಿನ ಹುಡುಗಿ ಪೂಜಾ ಚಿತ್ರದ ನಾಯಕ ನಟಿ. ಈ ಇಬ್ಬರ ನಡುವೆ ನಡೆಯುವ ಮುದ್ದಾದ ಪ್ರೀತಿ ಕಥೆಗೆ ಅಷ್ಟೇ ಸೊಗಸಾದ ಮ್ಯೂಸಿಕ್ ಸ್ಪರ್ಶವಿದ್ದು, ರಮಣಿ ಸುಂದರೇಶನ್, ಅನಿಲ್ ಕೃಷ್ಣ ಮತ್ತು ವಿಜಯ್ ರಾಜ್ ಮೂವರು ಸಂಗೀತ ನಿರ್ದೇಶಕರ ಸಂಗೀತ
ಸಂಯೋಜನೆ ಇದೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಮೈಸೂರು ಚಿತ್ರಕ್ಕಿದೆ. ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಮೂಡಿ ಬಂದಿವೆ. ಶ್ರೀಕಾಂತ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಜ್ಯೂನಿಯರ್ ನರಸಿಂಹರಾಜು, ಸತ್ಯಜಿತ್, ಕುರಿಪ್ರತಾಪ್, ಭಾಸ್ಕರ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಒಳಗೊಂಡಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್​.ಆರ್ ಕಂಬೈನ್ಸ್ ಬ್ಯಾನರ್ ನಡಿ ನಿರ್ದೇಶಕ ವಾಸುದೇವ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜಗದೀಶ್,ಕೆ.ಆರ್ ಅಪ್ಪಾಜಿ ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
6528

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು