News Karnataka Kannada
Sunday, May 05 2024
ಸಾಂಡಲ್ ವುಡ್

ಡಿಸೆಂಬರ್ ನಿಂದ ರಮೇಶ್‌ ಅರವಿಂದ ನಟನೆಯ “ಶಿವಾಜಿ ಸುರತ್ಕಲ್‌-2′ ಶುರು

Ramesh
Photo Credit :

ರಮೇಶ್‌ ಅರವಿಂದ ನಟನೆಯ “ಶಿವಾಜಿ ಸುರತ್ಕಲ್‌-2′ ಚಿತ್ರಕ್ಕೆ ಗುರುವಾರ ಮುಹೂರ್ತ ನಡೆದಿದೆ. ಮಲ್ಲೇಶ್ವರಂನ ಬಂಡೆ ಗಣೇಶ ದೇವಸ್ಥಾನದಲ್ಲಿ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿದ್ದು, ಪ್ರಮುಖ ತಾರಾಗಣ ತಂತ್ರಜ್ಞರ ತಂಡ ಎಲ್ಲರೂ ಭಾಗಿಯಾಗಿದ್ದರು.

ಇನ್ನು ತಾರಾಗಣದಲ್ಲಿ ಮಗಳು ಜಾನಕಿ ಧಾರಾವಾಹಿಯ ರಾಕೇಶ್‌ ಮಯ್ಯ ನಟಿಸುತ್ತಿದ್ದಾರೆ. ಈಗಾಗ ರಾಕೇಶ್‌, ಶುಭಮಂಗಳ ಮತ್ತು ಟೆನಂಟ್‌ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈಗ ಶಿವಾಜಿ ಸುರತ್ಕಲ್‌-2 ಚಿತ್ರತಂಡ ಸೇರಿಕೊಂಡಿದ್ದಾರೆ. ಈಗಷ್ಟೇ ತರಬೇತಿ ಮುಗಿಸಿ ಕೆಲಸಕ್ಕೆ ಸೇರಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು ಚಿತ್ರದುದ್ದಕ್ಕು ಪ್ರಾಮುಖ್ಯತೆ ವಹಿಸುವ ಪಾತ್ರವಾಗಿದೆ.

ಈ ಚಿತ್ರದಲ್ಲಿ ವಿನಾಯಕ್‌ ಜೋಷಿ ಕೂಡಾ ನಟಿಸುತ್ತಿದ್ದಾರೆ. ಇವರದ್ದು ರಫ್ ಅಂಡ್‌ ಟಫ್ ಪೊಲೀಸ್‌ ಅಧಿಕಾರಿ ಪಾತ್ರವಾಗಿದ್ದು ಚಿತ್ರದ ಕಥೆಗೆ ಮಹತ್ವದ ತಿರುವು ನೀಡುತ್ತದೆಯಂತೆ.

ಚಿತ್ರಕ್ಕೆ ನಕುಲ್‌ ಅಭಯಂಕರ್‌ ಸಂಗೀತವಿದೆ. ರಮೇಶ್‌ ಅರವಿಂದ್‌ ಅವರ 103ನೇ ಚಿತ್ರ ಇದು. ಉಳಿದಂತೆ ಚಿತ್ರದಲ್ಲಿ ರಾಧಿಕಾ ನಾರಾಯಣ್‌, ಮೇಘನಾ ಗಾಂವ್ಕರ್‌, ರಾಘುರಮಣ ಕೊಪ್ಪ, ವಿದ್ಯಾ ಮೂರ್ತಿ ಇವರೆಲ್ಲ ಈಗಾಗಲೆ ತಾರಾಗಣದಲ್ಲಿದ್ದು, ಆಕಾಶ್‌ ಶ್ರೀವತ್ಸ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ಶಿವಾಜಿ ಸುರತ್ಕಲ್‌-2 ಚಿತ್ರ ಮೂಡಿಬರಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು