News Karnataka Kannada
Monday, April 29 2024
ಸಾಂಡಲ್ ವುಡ್

ಕೆ.ಆರ್.ಪೇಟೆ ಕೆ.ಜಿ.ಬಿ ಚಿತ್ರಮಂದಿರದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟ ಪುರುಷೋತ್ತಮ ಚಿತ್ರ

Puru
Photo Credit :

ಸಾಂಡಲ್ ವುಡ್: ಪುರುಷೋತ್ತಮ  ಚಿತ್ರ ಕೆ.ಆರ್.ಪೇಟೆ ಪಟ್ಟಣ ಕೆ.ಜಿ.ಬಿ ಚಿತ್ರಮಂದಿರದಲ್ಲಿ ಎರಡನೇ ವಾರಕ್ಕೆ ಕಾಲಿಟ್ಟಿದ್ದರಿಂದ  ನಾಯಕ ನಟ ಜಿಮ್ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಮಾತನಾಡಿದ  ಅವರು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಾಂಸಾರಿಕ ಚಲನಚಿತ್ರ ಜೊತೆಗೆ ಗಂಡ ಕೇವಲ ಹೆಂಡತಿಯ ಯಜಮಾನನಾಗಿರದೇ ಆಕೆಯ ಪ್ರತಿಯೊಂದು ಭಾವನೆ, ಸಮಸ್ಯೆಗಳನ್ನು ಅರಿತು ಬದುಕು  ಸಾಗಿಸಬೇಕು. ಪುರುಷ, ಹೆಣ್ಣನ್ನು ಗೌರವದಿಂದ, ವಿಶ್ವಾಸದಿಂದ ಕಂಡಾಗ ಮಾತ್ರ ಆತ “ಪುರುಷೋತ್ತಮ’ ಎನಿಸಿಕೊಳ್ಳುತ್ತಾನೆ. ಇಂತಹ ಒಂದು ಕಥಾ ಅಂತರದೊಂದಿಗೆ ತೆರೆಗೆ ಬಂದಿರುವ ಚಿತ್ರ ‘ಪುರುಷೋತ್ತಮ’

ಡೈವೋರ್ಸ್‌ ಲಾಯರ್‌, (ಅಡ್ವೊಕೇಟ್‌) ಪುರುಷೋತ್ತಮ ಈತನದ್ದು ಹೆಂಡತಿ ಮಗಳಿರುವ ಸುಂದರ ಕುಟುಂಬ. ಜಗತ್ತಿನಲ್ಲಿ ಗಂಡ–ಹೆಂಡತಿಯಷ್ಟು  ಸುಂದರವಾದ ಸ್ನೇಹ ಸಂಬಂಧ ಬೇರೊಂದಿಲ್ಲಾ ಅನ್ನುವ ಪುರುಷರು, ಅಪ್ಪಟ ಗೃಹಿಣಿಯಾಗಿಯೂ ಯಕ್ಷಗಾನ ಕಲಾವಿದೆಯಾಗಿರುವ ನಟಿ ವಾಸುಕಿ. ಚಿತ್ರತಂಡದ ಅದ್ಬುತ ನಟನೆಯಿಂದ ಸತತ ಎರಡು ವಾರದಿಂದಲೂ ಉತ್ತಮ ಪ್ರತಿಕ್ರಿಯೆ ಕಾಣುತ್ತಿದೆ ಸಿನಿಮಾ ಯಶಸ್ಸಿಗೆ ಪ್ರೇಕ್ಷಕರು ಕಾರಣ ಎಂದು ತಿಳಿಸಿದರು.

ನಾಯಕನಟ ಜಿಮ್ ರವಿ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ವಿಜಯ ರಾಮೇಗೌಡ ಅರ್ಪಿಸುವ ರವಿ ಜಿಮ್ ಪ್ರೊಡಕ್ಷನ್  ರವರ ಬ್ಯಾನರ್ ಅಡಿಯಲ್ಲಿ  ತಯಾರಾದ ಪುರುಷೋತ್ತಮ ಚಿತ್ರ ಕ್ಕೆ ಸಹ ನಿರ್ಮಾಪಕ ಮೈಸೂರು ಪ್ರಭು ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು