ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕಡೇ ಚಿತ್ರ ಜೇಮ್ಸ್ನ ಟೀಸರ್ ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೇ ಸಮಯದಲ್ಲಿ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಿನಿಮಾ ಹಾಲಿವುಡ್ ರೇಂಜ್ನಲ್ಲಿದೆ ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಬಹುನಿರೀಕ್ಷಿತ ಜೇಮ್ಸ್ ಚಿತ್ರಕ್ಕೆ ಚೇತನ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಗ್ಯಾಂಗ್ಸ್ಟರ್ ಕಥೆ ಇದಾಗಿದೆ. ಮೇಕಿಂಗ್ ಅದ್ಧೂರಿಯಾಗಿದ್ದು, ಪುನೀತ್ ಎಂಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಪ್ಪು ಅಭಿನಯಕ್ಕೆ ಶಿವರಾಜ್ಕುಮಾರ್ ದನಿಯಾಗಿರೋದು ಇನ್ನೂ ಕಿಕ್ ನೀಡುತ್ತಿದೆ ಅಂತಿದ್ದಾರೆ ಫ್ಯಾನ್ಸ್.