ಸ್ಯಾಂಡಲ್ವುಡ್ನ ಪರ್ಫೆಕ್ಟ್ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್ ದಾಂಪತ್ಯಕ್ಕೆ ಇದೀಗ ಐದು ವರ್ಷ. ಯಾವುದೇ ಕಾಂಟ್ರವರ್ಸಿ ಮಾಡಿಕೊಳ್ಳದೇ ಮದುವೆಯಾದ ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯಾಗಿ ಐದು ವರ್ಷದ ಸಂಭ್ರಮಕ್ಕೆ ರಾಧಿಕಾ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ನನ್ನನ್ನು ಪ್ರತಿದಿನ ಇನ್ನೂ ಉತ್ತಮಳಾಗೋದಕ್ಕೆ ಸಹಾಯ ಮಾಡ್ತ್ಯ, ಜೀವನ ಹಾಗೂ ಪ್ರೀತಿ ಎರಡರಲ್ಲೂ ದಿನವೂ ಒಂದೊಂದು ಹೊಸ ವಿಷಯ ನಾನು ನಿನ್ನಿಂದ ಕಲಿತಿದ್ದೇನೆ. ಕನಸನ್ನು ಎಂದೂ ಬಿಟ್ಟುಕೊಡಬಾರದು ಅನ್ನೋದನ್ನು ನಿನ್ನನ್ನು ನೋಡಿ ಕಲಿಯಬೇಕು. ನಿಸ್ವಾರ್ಥ ಪ್ರೀತಿ ನಿನ್ನದು. ನನ್ನನ್ನು ಖುಷಿಯಾಗಿಡೋಕೆ ನೀನು ಹಾಕುವ ಎಫರ್ಟ್ಸ್ ನನಗೆ ದಿನವೂ ಕಾಣುತ್ತದೆ. ಇದು ಪರಿಶುದ್ಧ ಪ್ರೀತಿ. ಹ್ಯಾಪಿ ಆನಿವರ್ಸರಿ ಸ್ವೀಟ್ ಹಾರ್ಟ್ ಎಂದು ಹೇಳಿದ್ದಾರೆ.