ಬೆಂಗಳೂರು: ನಟ ಕಿರಣ್ ರಾಜ್ ಅಭಿನಯಿಸಿರುವ ‘ಭರ್ಜರಿ ಗಂಡು’ ಸಿನಿಮಾ ಈ ವಾರ (ಏಪ್ರಿಲ್ 5) ರಾಜ್ಯಾದ್ಯಂತ ಈ ಸಿನಿಮಾ ತೆರೆ ಕಾಣಲಿದೆ.
ಕಿರಣ್ ರಾಜ್ ಕಿರುತೆರೆಯಲ್ಲಿ ಕಿರಣ್ ರಾಜ್ ಅವರನ್ನು ನೋಡಿ ಮೆಚ್ಚಿಕೊಂಡಿರುವ ಅಭಿಮಾನಿಗಳು ದೊಡ್ಡ ಪರದೆಯಲ್ಲಿ ಕೂಡ ಅಷ್ಟೇ ಪ್ರೋತ್ಸಾಹ ನೀಡುತ್ತಾರೆ ಎಂಬ ಭರವಸೆ ಈ ಚಿತ್ರ ತಂಡಕ್ಕಿದೆ.
‘ಭರ್ಜರಿ ಗಂಡು’ ಸಿನಿಮಾದಲ್ಲಿ ಕಿರಣ್ ರಾಜ್ ಅವರು ಹಳ್ಳಿ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ.
‘ಭರ್ಜರಿ ಗಂಡು’ ಸಿನಿಮಾವನ್ನು ಪ್ರಸಿದ್ದ್ ಸಿನಿಮಾಸ್, ಮದನ್ ಗೌಡ ಮತ್ತು ಅನಿಲ್ ಕುಮಾರ್ ಅವರು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ, ವೆಂಕಿ ಯುಡಿವಿ ಅವರ ಸಂಕಲನ ಈ ಸಿನಿಮಾಗೆ ಇದೆ. ಮಳವಳ್ಳಿ ಸಾಯಿಕೃಷ್ಣ ಅವರು ‘ಭರ್ಜರಿ ಗಂಡು’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಟ್ರೇಲರ್ನಲ್ಲಿ ಡೈಲಾಗ್ಗಳು ಗಮನ ಸೆಳೆದಿವೆ.
ಕಿರಣ್ ರಾಜ್ ಅವರಿಗೆ ಜೋಡಿಯಾಗಿ ಯಶಾ ಶಿವಕುಮಾರ್ ಅವರು ನಟಿಸಿದ್ದಾರೆ. ರಾಕೇಶ್ ರಾಜ್, ರಮೇಶ್ ಭಟ್, ಸುರೇಖಾ, ಜಯಶ್ರೀ, ವೀಣಾ ಸುಂದರ್, ನಾಗೇಶ್ ರೋಹಿತ್, ಮಡೆನೂರು ಮನು, ಸೌರಭ್ ಕುಲಕರ್ಣಿ, ಗೋವಿಂದೇ ಗೌಡ ಸೇರಿದಂತೆ ಅನೇಕ ಕಲಾವಿದರು ‘ಭರ್ಜರಿ ಗಂಡು’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.