ಬೆಂಗಳೂರು: ಶುಭಾ ಪೂಂಜಾ ನಟಿಸಿರುವ ಅಂಬುಜಾ ಚಿತ್ರ ಬಿಡುಗಡೆಗೆ ಸಿದ್ಧ ವಾಗಿದೆ. ಚಿತ್ರವನ್ನು ಮೇನಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರ ತಂಡಕ್ಕಿದೆ.
ಶ್ರೀನಿ ಹನುಮಂತ ರಾಜು ನಿರ್ದೇಶನದ ಚಿತ್ರವನ್ನು ಕಾಶಿನಾಥ್ ಮಡಿವಾಳ್ ಅವರು ನಿರ್ಮಾಣ ಮಾಡಿದ್ದಾರೆ. 2020ರಲ್ಲಿ ಘಟಿಸಿದ ಘಟನೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣವಾಗಿದೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ಅನನ್ಯಾ ಭಟ್, ಅನುರಾಧಾ ಭಟ್, ಎಂ.ಡಿ. ಪಲ್ಲವಿ ಹಾಗೂ ಬೇಬಿ ಆಕಾಂಕ್ಷ ಹಾಡಿದ್ದಾರೆ.